ಬೆಂಗಳೂರು: ನಿರ್ದೇಶಕ ನಾಗಶೇಖರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಂನನ್ನು ನಾಯಕನಾಗಿ ಪರಿಚಯಿಸಲು ನವೆಂಬರ್ ನಲ್ಲಿ ನಾನು ಅವಳು ಎಂಬ ಸಿನಿಮಾದ ಫರ್ಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದರು. ನಾಲ್ಕು ಭಾಷೆಗಳಲ್ಲಿ ಸಿನಿಮಾ ಮಾಡಲು ನಿರ್ಧರಿಸಿದ್ದು, ನಾಯಕಿ ಪಾತ್ರ ಮಾಡಲು ಅಕ್ಷರಾ ಹಾಸನ್ ಅವರನ್ನು ಭೇಟಿ ಮಾಡಿದ್ದರು. ಆದರೆ ಇತ್ತೀಚಿನ ವಿಷಯವೆನೇಂದರೇ, ನಾನು ಮತ್ತು ಅವಳು ಸಿನಿಮಾ ಪ್ರಾಜೆಕ್ಟ್ ಮುಂದೂಡಲಾಗಿದೆ.
ನಿರ್ಮಾಪಕ ಶ್ರೀನಿವಾಸ್ ಮತ್ತು ನಾಗಶೇಖರ್ ತಮ್ಮ ವಯಕ್ತಿಕ ಕಮಿಟ್ ಮೆಂಟ್ ಗಳಿಗೋಸ್ಕರ ವಿಕ್ರಮ್ ಜೊತೆ ಚರ್ಚಿಸಿ ಸಿನಿಮಾ ಮುಂದೂಡಿದ್ದಾರೆ. ಸದ್ಯಕ್ಕೆ ಪ್ರಾಜೆಕ್ಟ್ ಮುಂದೂಡಲಾಗಿದೆ, ಕೆಲ ಸಮಯದ ನಂತರ ಸಿನಿಮಾ ಆರಂಭವಾಗುವುದು ಎಂದು ವಿಕ್ರಂ ಹೇಳಿದ್ದಾರೆ.
ಬೇರೆ ನಿರ್ದೇಶಕರುಗಳಿಂದ ಎರಡು ಮೂರು ಆಫರ್ ಬಂದಿದ್ದವು. ಆ ಸಂಬಂಧ ಇನ್ನೂ ಮಾತುಕತೆ ನಡೆಯುತ್ತಿದೆ. ನಿರ್ದೇಶಕರುಗಳ ಜೊತೆ ಚರ್ಚಿಸಿದ ನಂತರ ಸ್ಪಷ್ಟ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ದೊಡ್ಡ ಪರದೆಗಾಗಿ ನಾನು ತಯಾರಿ ನಡೆಸುತ್ತಿದ್ದೇನೆ. ನನ್ನ ಮೊದಲ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಗಳಿವೆ, ಈ ಪ್ರಾಜೆಕ್ಟ್ ರದ್ದಾಗಿಲ್ಲ, ಆದರೆ ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ, ನಿರ್ಮಾಪಕರಿಗೆ ಬೇರೆ ಕಮಿಂಟ್ ಮೆಂಟ್ ಇರುವ ಕಾರಣ, ಇನ್ನೂ ನಾಲ್ಕರಿಂದ ಆರು ತಿಂಗಳು ಸಮಯ ಬೇಕಾಗುವ ಸಾಧ್ಯತೆಯಿದೆ. ಈ ಸಂಬಂಧ ನಿರ್ಮಾಪಕರು ನನ್ನ ಜೊತೆ ಮಾತನಾಡಿದ್ದಾರೆ, ಈ ಚಿತ್ರಕ್ಕಾಗಿ ಕಾಯದೇ ಬೇರೆ ಒಳ್ಳೆಯ ಪ್ರಾಜೆಕ್ಟ್ ಬಂದರೇ ಒಪ್ಪಿಕೊಳ್ಳಲು ಹೇಳಿದ್ದಾರೆ ಎಂದು ವಿಕ್ರಂ ವಿವರಿಸಿದ್ದಾರೆ.
ಒಮ್ಮೆ ಪ್ರಾಜೆಕ್ಟ್ ಆರಂಭವಾದರೇ ಯಾವುದೇ ಅಡೆತಡೆಗಳು ಉಂಟಾಗಬಾರದೆಂಬ ಕಾರಣಕ್ಕೆ ಕಾಯಲು ಹೇಳಿದ್ದಾರೆ. ಈ ಸಿನಿಮಾಗೆ ತುಂಬಾ ಬಂಡವಾಳದ ಅವಶ್ಯಕತೆಯಿದೆ, ಜೊತೆಗೆ ಇನ್ನೂ ನಾಯಕಿಗಾಗಿ ಹುಡುಕಾಟ ನಡೆದಿದೆ ಎಂದು ವಿಕ್ರಂ ಹೇಳಿದ್ದಾರೆ.