ಸಿನಿಮಾ ಸುದ್ದಿ

ಅಜಯ್ ರಾವ್ ಅಭಿನಯದ 'ತಾಯಿಗೆ ತಕ್ಕ ಮಗ'ನಿಗೆ ಸಿಕ್ಕ 'ರೆಬೆಲ್' ಅಮ್ಮ!

Shilpa D
ಬೆಂಗಳೂರು: ನಿರ್ದೇಶಕ ಶಶಾಂಕ್ ನಿರ್ಮಾಣದ ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ಅಜೇಯ ಕೃಷ್ಣ ರಾವ್ ನಟಿಸುತ್ತಿದ್ದು, ಹಿಂದಿದ್ದ ನಿರ್ದೇಶಕರು ಬದಲಾಗಿದ್ದು, ವೇದ್ ಗುರು ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಚಿತ್ರದಲ್ಲಿ ಅಜೇಯ್ ರಾವ್ ಅವರ ತಾಯಿ ಪಾತ್ರಕ್ಕಾಗಿ ಸೂಕ್ತ ಕಲಾವಿದರನ್ನು ಹುಡುಕಲಾಗುತ್ತಿದೆ. ಎಲ್ಲಾ ಕೋನಗಳಲ್ಲೂ ಯೋಚಿಸಿದ ನಂತರ ಸುಮಲತಾ ಅವರನ್ನು ತಾಯಿ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ.
ಸಿನಿಮಾದಲ್ಲಿ ನಾಯಕನ ತಾಯಿಯ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸಿನಿಮಾಗೆ ರೆಬೆಲ್ ಮದರ್ ಸಿಕ್ಕಿದ್ದಾರೆ ಎಂದು ನಿರ್ಮಾಪಕರು ಅಭಿಪ್ರಾಯ ಪಟ್ಟಿದ್ದಾರೆ. ಸಿನಿಮಾದಲ್ಲಿ ಸುಮಲತಾ ವಕೀಲರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಈ ಹಿಂದೆಯೂ ಎಕ್ಸ್ ಕ್ಯೂಸ್ ಮಿ ಚಿತ್ರದಲ್ಲಿ ಸುಮಲತಾ ಮತ್ತು ಅಜಯ್ ರಾವ್ ಜೊತೆ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಇದು ಅಜಯ್ ರಾವ್ ಅವರ 25ನೇ ಸಿನಿಮಾವಾಗಿದೆ.
ಚಿತ್ರದ ಫ್ರೀ ಪ್ರೊಡಕ್ಷನ್ ಹಾಗೂ ಚಿತ್ರಕಥೆಗಾಗಿ ಸುಮಾರು 8 ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ಡಿಸೆಂಬರ್ ತಿಂಗಳಲ್ಲಿ ಸಿನಿಮಾಗೆ ಮೂಹೂರ್ತ ನಿಗದಿ ಪಡಿಸಲಾಗಿದೆ. ಉತ್ತಮ ಗುಣಮಟ್ಟದ ಸಿನಿಮಾ ತಯಾರಿಸಿ ಜನರಿಗೆ ನೀಡಬೇಕೆಂಬುದು ನಮ್ಮ ಪ್ರೊಡಕ್ಷನ್ ಹೌಸ್ ನ ಉದ್ದೇಶವಾಗಿದೆ ಎಂದು ಶಶಂಕ್ ಹೇಳಿದ್ದಾರೆ.
SCROLL FOR NEXT