ಕೃತಿ ಕರಬಂಧ 
ಸಿನಿಮಾ ಸುದ್ದಿ

ಸದ್ಯದ ಪರಿಸ್ಥಿತಿಯಲ್ಲಿ ಮಹಿಳಾ ಪ್ರಧಾನ ಸಿನಿಮಾ ಮಾಡಲು ಸಾಧ್ಯವಿಲ್ಲ: ಕೃತಿ ಕರಬಂಧ

ಮಹಿಳಾ ಪ್ರಧಾನ ಕಥೆಯುಳ್ಳ ಸಿನಿಮಾದಲ್ಲಿ ತಾನು ಸದ್ಯದ ಪರಿಸ್ಥಿತಿಯಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಬಾಲಿವುಡ್ ನಟಿ ಕೃತಿ ಕರಬಂಧ ...

ಮುಂಬಯಿ: ಮಹಿಳಾ ಪ್ರಧಾನ ಕಥೆಯುಳ್ಳ ಸಿನಿಮಾದಲ್ಲಿ ತಾನು ಸದ್ಯದ ಪರಿಸ್ಥಿತಿಯಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಬಾಲಿವುಡ್ ನಟಿ ಕೃತಿ ಕರಬಂಧ ಹೇಳಿದ್ದಾರೆ.
ಶಾದಿ ಮೈನ್ ಜರೂರ್ ಸಿನಿಮಾದಲ್ಲಿ ರಾಜ್ ಕುಮಾರ್ ರಾವ್ ಅವರ ಜೊತೆ ನಟಿಸಿರುವ ಕೃತಿಗೆ, ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿಸಲು ಬಯಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗಿರುವ ಸನ್ನಿವೇಶದಲ್ಲಿ ಮಹಿಳಾ ಪ್ರಧಾನ ಸಿನಿಮಾದಲ್ಲಿ ತಾವು ನಟಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಮಹಿಳಾ ಪ್ರಧಾನ ಕಥೆಯಲ್ಲಿ  ನಟಿಸುವಷ್ಟು ಪ್ರಸಿದ್ಧಿ ನನಗಿಲ್ಲ, ಇಡೀ ಥಿಯೇಟರ್ ನಲ್ಲಿರುವ ಜನರನ್ನೆಲ್ಲಾ ಆಕರ್ಷಿಸುವ ಸಾಮರ್ಥ್ಯ ನನಗಿಲ್ಲ ಎಂದು ಪ್ರಾಮಾಣಿಕ ಉತ್ತರ ನೀಡಿದ್ದಾರೆ.
ಒಬ್ಬ ಕಲಾವಿದೆಯಾಗಿ ಮಹಿಳಾ ಪ್ರಧಾನ ಕಥೆಯುಳ್ಳ ಸಿನಿಮಾದಲ್ಲಿ ಲಾಭದಾಯಕವಾದ್ದೇ,ಆದರೆ ನನ್ನ ಸೃಜನ ಶೀಲತೆಯ ತೃಪ್ತಿಗಾಗಿ ನಿರ್ಮಾಪಕರನ್ನು ನೋಯಿಸಲು ನನಗಿಷ್ಟವಿಲ್ಲ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇದು ಸಾಧ್ಯವಾಗಬಹುದು, ವಿಶೇಷವಾಗಿ ಕನ್ನಡದಲ್ಲಿ, ಏಕೆಂದರೇ ನಾನು ಕನ್ನಡ ಸಿನಿಮಾ ರಂಗದಲ್ಲಿ ಜನಪ್ರಿಯ ನಟಿಯಾಗಿದ್ದೇನೆ ಎಂದು ಕೃತಿ ವಿವರಿಸಿದ್ದಾರೆ.
ದೆಹಲಿಯಲ್ಲಿ ಹುಟ್ಟಿ ಬೆಳೆದ ಕೃತಿ ತಮ್ಮ ಪ್ರೌಢಶಾಲೆ ವಿದ್ಯಾಭ್ಯಾಸ ಮುಗಿದ ನಂತರ ಬೆಂಗಳೂರಿಗೆ ಆಗಮಿಸಿದರು,  ತೆಲುಗು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನ ಕೃತಿ ಮಾಡಲಿಂಗ್ ಮಾಡುತ್ತಿದ್ದರು.. ನಂತರ ಬಾಲಿವುಡ್ ನ ಗೆಸ್ಟ್ ಲಿನ್ ಲಂಡನ್ ಸಿನಿಮಾದಲ್ಲಿ ನಟಿಸಿದರು. 
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ.  ರಾಜ್ ಕುಮಾರ್ ರಾವ್ ಅವರ ಜೊತೆ ಕೆಲಸ ಮಾಡಿರುವುದು ನನ್ನ ಅದೃಷ್ಟ, ಅವರಿಂದ ನಾನು ತುಂಬಾ ಕಲಿತಿದ್ದೇನೆ, ಅವರೊಬ್ಬ ಉತ್ತಮ ಸಹ ಕಲಾವಿದ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT