ಸಿನಿಮಾ ಸುದ್ದಿ

ಟಗರು ಚಿತ್ರದ ವಿಲ್ಲನ್ 'ಡಾಲಿ' ಪಾತ್ರದಿಂದ ಇನ್ನೂ ಹೊರಬರಲು ಆಗಿಲ್ಲ: ಧನಂಜಯ್

Shilpa D
ಬೆಂಗಳೂರು: ಸೂರಿ ನಿರ್ದೇಶನದ ಟಗರು ಸಿನಿಮಾ  ಟೀಸರ್ ನವೆಂಬರ್ 7 ರಂದು ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಶಿವಣ್ಣ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಮೊದಲ ಬಾರಿಗೆ ಟಗರು ಸಿನಿಮಾದಲ್ಲಿ ವಿಲ್ಲನ್ ಪಾತ್ರದಲ್ಲಿ  ಧನಂಜಯ ಅಭಿನಯಿಸಿದ್ದಾರೆ. ಟಗರು ಚಿತ್ರದಲ್ಲಿ ಧನಂಜಯ ಡಾಲಿ ಪಾತ್ರ ನಿರ್ವಹಿಸಿದ್ದು, ವಶಿಷ್ಟ ಸಿಂಹ ಜೊತೆ ಪರದೆ ಹಂಚಿಕೊಂಡಿದ್ದಾರೆ. 
ಧನಂಜಯ್ ತಮ್ಮ  ಪಾತ್ರವನ್ನು ಎಂಜಾಯ್ ಮಾಡಿದ್ದಾರೆ. ಟಗರು ಚಿತ್ರದಲ್ಲಿನ ತಮ್ಮ ಪಾತ್ರದ ಶೂಟಿಂಗ್ ಪೂರ್ಣಗೊಂಡಿದೆ. ಆದರೆ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿರುವ ವಿಷಯವೆಂದರೇ ಧನಂಜಯ ಇನ್ನೂ ಡಾಲಿ ಪಾತ್ರದ ಹ್ಯಾಂಗ್ ಓವರ್ ನಿಂದ ಹೊರ ಬಂದಿಲ್ಲ, 
ಶೂಟಿಂಗ್ ಪೂರ್ಣಗೊಂಡಿದ್ದರೂ ನಾನು ಇನ್ನೂ ಡಾಲಿಯಾಗಿಯೇ ಇದ್ದೇನೆ, ಆ ಪಾತ್ರ ನನ್ನಲ್ಲಿ ಆಳವಾಗಿ ಬೇರೂರಿದೆ ಎಂದು ಹೇಳಿದ್ದಾರೆ.ಜೊತೆಗೆ ಟಗರು ಸಿನಿಮಾ ರಿಲೀಸ್ ಗಾಗಿ ಕಾಯುತ್ತಿರುವ ಧನಂಜಯ್ ಬೇರೆ ಯಾವುದೇ ಪ್ರಾಜೆಕ್ಟ್ ಗೆ ಇನ್ನೂ ಸಹಿ ಮಾಡಿಲ್ಲ, ಚಗರು ಸಿನಿಮಾ ಪಾತ್ರಕ್ಕೆ  ಪ್ರೇಕ್ಷಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಿದ ನಂತರ ಮುಂದಿನ ಚಿತ್ರದ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದಾರೆ.
SCROLL FOR NEXT