ನಮಿತಾ ಮತ್ತು ವೀರೇಂದ್ರ ಚೌಧರಿ 
ಸಿನಿಮಾ ಸುದ್ದಿ

ನವೆಂಬರ್ 24 ಕ್ಕೆ ನಟ ವಿರೇಂದ್ರ ಚೌಧರಿ ಜೊತೆ ನಟಿ ನಮಿತಾ ವಿವಾಹ

ನಟಿ ನಮಿತಾ ನವೆಂಬರ್ 24 ರಂದು ತಮ್ಮ ದೀರ್ಘಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿಯಲಿದ್ದಾರೆ....

ಚೆನ್ನೈ: ನಟಿ ನಮಿತಾ ನವೆಂಬರ್ 24 ರಂದು ತಮ್ಮ ದೀರ್ಘಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿಯಲಿದ್ದಾರೆ.
ತಮಿಳು ನಟ ವೀರೇಂದ್ರ ಚೌದರಿ ಮತ್ತು ನಮಿತಾ ಹಲವು ದಿನಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು.  ವಿವಾಹಕ್ಕೆ ಎರಡೂ ಕುಟುಂಬದವರು  ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಾಗಾಗಿ ನವೆಂಬರ್ 24ರಂದು ಇವರಿಬ್ಬರ ಮದುವೆ ತಿರುಪತಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಮಿತಾ ಮದುವೆ ಸುದ್ದಿ ಪ್ರಕಟಿಸಿದ್ದು, 'ನವೆಂಬರ್ 24ರಂದು ವೀರ್ ಮತ್ತು ನಾನು ಮದುವೆಯಾಗುತ್ತಿದ್ದೇವೆ. ನಿಮ್ಮ ಪ್ರೀತಿ ಮತ್ತು ಹಾರೈಕೆ ಇರಲಿ. ನ.24ರಂದು ನಾನು ಮದುಮಗಳಾಗುತ್ತಿದ್ದೇನೆ. ಎಲ್ಲರಿಗೂ ಥ್ಯಾಂಕ್ಸ್ ' ಎಂದಿದ್ದಾರೆ.
ಇತ್ತೀಚೆಗಷ್ಟೇ ನಮಿತಾ ತಮಿಳಿನ 'ಬಿಗ್ ಬಾಸ್‌'ನಲ್ಲೂ ಸ್ಪರ್ಧಿಸಿದ್ದರು. ಇದುವರೆಗೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ನೀಲಕಂಠ, ಇಂದ್ರ, ಹೂ, ನಮಿತಾ ಐ ಲವ್ ಯೂ, ಬೆಂಕಿ ಬಿರುಗಾಳಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೌಜನ್ಯ ಕೇಸ್‌ ಮರು ತನಿಖೆಗೆ ಸುಪ್ರೀಂ ಆದೇಶ: ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದು ಏನು?

ಮಾಗಡಿ: ಚಕ್ರಬಾವಿ ಮರುಳಸಿದ್ದೇಶ್ವರ ಜಂಗಮ ಮಠದ ಸ್ವಾಮೀಜಿ ಲಿಂಗೈಕ್ಯ

ರಾಮ ಮಂದಿರದಲ್ಲಿ ಕಳ್ಳತನದ 105 ಘಟನೆ ಸಿಸಿಟಿವಿಯಲ್ಲಿ ಪತ್ತೆ: ಸುಪ್ರೀಂ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ

5 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರಿನ ಬಜಪೆ ಠಾಣೆ ಇನ್ಸ್‌ಪೆಕ್ಟರ್ ಬಾಲಕೃಷ್ಣ!

KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚನೆ; ಹೈಕೋರ್ಟ್​​ನಿಂದ ಮಹತ್ವದ ಆದೇಶ