ದ್ವಿಭಾಷೆ ಚಿತ್ರ ರೋಗ್ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಯುವ ನಟ ಇಶಾನ್ ಗೆ ಬೇಡಿಕೆ ಹೆಚ್ಚಾಗಿದೆ. ಕನ್ನಡ ಮತ್ತು ತೆಲುಗು ಚಿತ್ರರಂಗದ ಹಲವು ನಿರ್ದೇಶಕರು ಮತ್ತು ನಿರ್ಮಾಪಕರು ಇಶಾನ್ ನನ್ನು ತಮ್ಮ ಚಿತ್ರಕ್ಕೆ ತೆಗೆದುಕೊಳ್ಳಲು ಉತ್ಸುಕ ತೋರುತ್ತಿದ್ದಾರೆ.
ತಮ್ಮ ಸೋದರ ಮತ್ತು ನಿರ್ಮಾಪಕ ಸಿಆರ್ ಮನೋಹರ್ ಅವರ ಜೊತೆ ಹಲವು ಕಥೆಗಳನ್ನು ಕೇಳಿರುವ ಇಶಾನ್ ಮುಂದಿನ ಚಿತ್ರವನ್ನು ಕನ್ನಡದಲ್ಲಿ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರದಲ್ಲಿ ನಿರ್ಮಾಪಕ ರಾಮು ಬಂಡವಾಳ ಹೂಡುತ್ತಿದ್ದಾರೆ. ರಾಮು ಎಂಟರ್ ಪ್ರೈಸಸ್ ಅಡಿಯಲ್ಲಿ ಇದು 38ನೇ ಸಿನಿಮಾವಾಗಿದ್ದು ಲಕ್ಕಿ ಶಂಕರ್ ನಿರ್ದೇಶಿಸುತ್ತಿದ್ದಾರೆ.
ಇನ್ನೂ ಶೀರ್ಷಿಕೆಯಿಡದ ಚಿತ್ರ ಡಿಸೆಂಬರ್ ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.