ಬೆಂಗಳೂರು: ಸೆನ್ನ ಹೆಗ್ಡೆ ಚೊಚ್ಚಲ ನಿರ್ದೇಶನದ ಕಥೆ ಒಂದು ಶುರುವಾಗಿದೆ ಚಿತ್ರದಲ್ಲಿ ಹೊಸಬ ನಟಿ ಪೂಜಾ ದೇವರಿಯಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ಚಿರಪರಿಚಿತವಾಗಿರುವ ಇರವಿ ಮತ್ತು ಕುಟ್ರುವೆ ತಂಡಾನಿ ಚಿತ್ರಗಳಿಗೆ ಪ್ರಶಸ್ತಿ ಗಳಿಸಿರುವ ಪೂಜಾ ದೇವರಿಯಾ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಬಂದಿರುವ ನಟಿ ಪೂಜಾ ಕಳೆದೊಂದು ವಾರದಿಂದ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಉತ್ತಮ ಕಥೆ, ವಿಷಯ ಪ್ರಕಾರ ಮತ್ತು ತಂಡದ ಜೊತೆ ನಾನು ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ಇದು ನನ್ನ ಮೊದಲ ಕನ್ನಡ ಚಿತ್ರವಾಗಿರುವುದರಿಂದ ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಇರುವ ಬದಲಾವಣೆಗಳನ್ನು ಗಮನಿಸಿಕೊಂಡು ಅಭಿನಯಿಸುತ್ತಿದ್ದೇನೆ. ಹೊಸಬಳಾಗಿ ವಿವಿಧ ಪ್ರೊಜೆಕ್ಟ್ ಗಳಲ್ಲಿ ಪ್ರಯೋಗ ನಡೆಸುವುದು ನನಗೆ ಇಷ್ಟವಾಗಿದೆ. ಅದು ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ ಎಂದು ಪೂಜಾ ದೇವರಿಯಾ ಹೇಳುತ್ತಾರೆ.
ರಕ್ಷಿತ್ ಅವರು ಚಿತ್ರಕ್ಕೆ ತಮ್ಮನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ನಟಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಕ್ಷಿತ್ ಅವರ ವೃತ್ತಿಪರತೆಯನ್ನು ನಾನು ಮೆಚ್ಚಿಕೊಳ್ಳುತ್ತೇನೆ. ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕಗೊಂಡೆ. ಟ್ವಿಟ್ಟರ್ ಮೂಲಕ ಅವರಿಗೆ ಸಂದೇಶ ಕಳುಹಿಸಿ ಯಾವುದಾದರೂ ಉತ್ತಮ ಕಥೆ ಸಿಕ್ಕಿದರೆ ಅದರಲ್ಲಿ ನಟಿಸಲು ತಯಾರಿದ್ದೇನೆ. ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿ ತೊಡಗಿದ್ದಾಗ ನನ್ನ ನೆನಪು ಬಂದು ಆಯ್ಕೆ ಮಾಡಿಕೊಂಡರು.
ಪರಮ್ವಾಹ್ ಸ್ಟುಡಿಯೊ ಮತ್ತು ಪುಷ್ಕರ್ ಫಿಲ್ಮ್ಸ್ ಜಂಟಿಯಾಗಿ ಚಿತ್ರ ತಯಾರಿಸುತ್ತಿದ್ದು, ದಿಗಂತ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ.