ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಉಪೇಂದ್ರ 
ಸಿನಿಮಾ ಸುದ್ದಿ

'ಹೋಮ್ ಮಿನಿಸ್ಟರ್'ನಲ್ಲಿ ಮಹಿಳೆಯಾಗಿ ಮಿಂಚಲಿರುವ ಉಪೇಂದ್ರ!

ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರ ಹೋಮ್ ಮಿನಿಸ್ಟರ್ ಚಿತ್ರ ತೆರೆ ಕಾಣಲು ಸಿದ್ಧವಾಗುತ್ತಿರುವಂತೆಯೇ ಇತ್ತ ಚಿತ್ರದಲ್ಲಿ ಉಪೇಂದ್ರ ಮಹಿಳಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರ ಹೋಮ್ ಮಿನಿಸ್ಟರ್ ಚಿತ್ರ ತೆರೆ ಕಾಣಲು ಸಿದ್ಧವಾಗುತ್ತಿರುವಂತೆಯೇ ಇತ್ತ ಚಿತ್ರದಲ್ಲಿ ಉಪೇಂದ್ರ ಮಹಿಳಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ  ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.
ಪ್ರತೀ ಚಿತ್ರದಲ್ಲೂ ವಿಭಿನ್ನತೆ ತೋರ ಬಯಸುವ ನಟ ಉಪೇಂದ್ರ ಇದೀಗ ತಮ್ಮ ಮುಂದಿನ ಚಿತ್ರದಲ್ಲಿ ಅಭಿಮಾನಿಗಳನ್ನು ಮಹಿಳಾ ಪಾತ್ರದಲ್ಲಿ ರಂಜಿಸಲಿದ್ದಾರೆ. ಹೌದು.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು  ವೈರಲ್ ಆಗಿದ್ದು, ಕಪ್ಪು ಬಣ್ಣ ಚೂಡಿದಾರ್ ತೊಟ್ಟಿರುವ ನಟ ಉಪೇಂದ್ರ ಮುಖಕ್ಕೆ ಕಪ್ಪು ಬಣ್ಣದ ಮುಸುಕು ಧರಿಸಿದ್ದಾರೆ. ಇದು ಹೋಮ್ ಮಿನಿಸ್ಟರ್ ಚಿತ್ರೀಕರಣ ಸ್ಥಳದಿಂದಲೇ ತೆಗೆದ ವಿಡಿಯೋ ಎನ್ನಲಾಗಿದೆ. ಹೋಮ್ ಮಿನಿಸ್ಟರ್  ಚಿತ್ರವನ್ನು ನಿರ್ದೇಶಕ ಸುಜಯ್ ಕೆ ಶ್ರೀಹರಿ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ ಎಂಬುದು ವಿಶೇಷ.
ಇನ್ನು ಉಪೇಂದ್ರ ಅವರ ಈ ಮಹಿಳಾ ಪಾತ್ರದ ಕುರಿತು ಚಿತ್ರ ತಂಡ ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ. ಉಪೇಂದ್ರ ಅವರ ಈ ಪಾತ್ರ ಕುತೂಹಲಕಾರಿಯಾಗಿದ್ದು, ಪ್ರೇಕ್ಷಕರು ಥಿಯೇಟರ್ ನಲ್ಲಿಯೇ ಆ ಕುತೂಹಲವನ್ನು  ತಣಿಸಿಕೊಳ್ಳಲಿ ಎಂಬುದು ಚಿತ್ರತಂಡದ ಭಾವನೆಯಾಗಿದೆ. ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ಶ್ರೀಕಾಂತ್ ಅವರು ಈ ಬಗ್ಗೆ ಮಾತನಾಡಿ, ಉಪೇಂದ್ರ ಅವರು ಮೊದಲ ಬಾರಿಗೆ ಮಹಿಳೆಯ ಪಾತ್ರದಲ್ಲಿ  ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಪಾತ್ರ ತುಂಬಾ ಕುತೂಹಲಕಾರಿಯಾಗಿದ್ದು, ಇದರ ಬಗ್ಗೆ ನಾನು ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾ ನೋಡಿದಾಗ ಪಾತ್ರದ ಪ್ರಾಮುಖ್ಯತೆ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಇನ್ನು ಹೋಮ್ ಮಿನಿಸ್ಟರ್ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಚಿತ್ರದ ಇನ್ನೆರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಮುಂದಿನ ತಿಂಗಳಾಂತ್ಯದ ಹೊತ್ತಿಗೆ ಇದೂ ಕೂಡ ಮುಕ್ತಾಯವಾಗಲಿದೆ ಎನ್ನಲಾಗಿದೆ.  ಮತ್ತೊಂದು ಪ್ರಮುಖ ವಿಚಾರವೆಂದರೆ ರಜನಿಕಾಂತ್ ಅವರ ರೋಬೋಟ್ 2.0 ಚಿತ್ರದ ಸಂಕಲನಕಾರ ಆ್ಯಂಟನಿ ಹೋಮ್ ಮಿನಿಸ್ಟರ್ ಚಿತ್ರದ ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ