ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಎಂಟ್ರಿಗಾಗಿ ಅಭಿಷೇಕ್ ಅಂಬರೀಷ್ ಭರ್ಜರಿ ತಯಾರಿ!

Shilpa D
ಬೆಂಗಳೂರು: ಸ್ಟಾರ್ ದಂಪತಿಯಾದ ಅಂಬರೀಷ್ ಮತ್ತು ಸುಮಲತಾ ಪುತ್ರ ಅಭಿಷೇಕ್ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ನೀಡುವ ಕಾಲ ಸನ್ನಿಹಿತವಾಗುತ್ತಿದೆ. ಎಲ್ಲಾ ಊಹಾ ಪೋಹಗಳಿಗೆ ತೆರೆ ಬಿದ್ದಿದ್ದು, ಮೊದಲ ಸಿನಿಮಾಗಾಗಿ ಅಭಿಷೇಕ್ ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದಾರೆ.
ಸಿನಿಮಾದಲ್ಲಿ ನಟಿಸಲು ತಯಾರಿ ನಡೆಸಿರುವ ಅಭಿಷೇಕ್, ನಟನಾ ಕೌಶಲ್ಯ ಹೆಚ್ಚಿಸಿಕೊಳ್ಳಲು ತರಬೇತಿ ಪಡೆಯುತ್ತಿದ್ದಾರೆ, ಸಿನಿಮಾಗಾಗಿ 30 ಕೆಜಿ ತೂಕ ಇಳಿಸಿಕೊಂಡಿರುವ ಅಭಿಷೇಕ್, ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ.
ಸಾಮಾನ್ಯವಾಗಿ ತಾರಾ ದಂಪತಿ ತಮ್ಮ ಮಕ್ಕಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುತ್ತಾರೆ, ಆದರೆ ಅಭಿಷೇಕ್ ವಿಷಯದಲ್ಲಿ ತುಸು ಭಿನ್ನ, ನಿರ್ಮಾಪಕರೇ ಅಭಿಷೇಕ್ ನನ್ನು ಕನ್ನಡ ಸಿನಿಮಾ ರಂಗಕ್ಕೆ ಕರತರಲು ಪ್ರಯತ್ನ ನಡೆಸಿದ್ದಾರೆ.
ಈ ಸಂಬಂಧ ಅಭಿಷೇಕ್ ತಾಯಿ ಸುಮಲತಾ ಅಂಬರೀಷ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ,
ಅಭಿಷೇಕ್ ಗೆ ನಾವು ಎಲ್ಲಾ ಅವಕಾಶ ಕಲ್ಪಿಸಿ, ಚಿನ್ನದ ತಟ್ಟೆಯಲ್ಲಿ ನೀಡುವುದರಲ್ಲಿ ನಂಬಿಕೆಯಿಲ್ಲ, ನಿರ್ಮಾಪಕರಾದ ಸಂದೇಶ್ ನಾಗರಾಜ್ ಮತ್ತು ಸೈಯ್ಯದ್,ಸೇರಿದಂತೆ ಹಲವರು ಅಭಿಷೇಕ್ ಚಿತ್ರರಂಗಕ್ಕೆ ಎಂಟ್ರಿ ನೀಡುವಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ, ಈಗಾಗಲೇ ಹಲವು ನಿರ್ದೇಶಕರ ಜೊತೆ ನಿರ್ಮಾಪಕರುಗಳು ಮಾತನಾಡಿದ್ದಾರೆ. ಚಿತ್ರಕಥೆ ಕೂಡ ಸಿದ್ಧವಾಗುತ್ತಿದೆ ಎಂದು ಹೇಳಿದ್ದಾರೆ.
ಈಗಾಗಲೇ ಒಬ್ಬರು ನಿರ್ಮಾಪಕರು ಮುಂದಿನ ವರ್ಷದ ಫೆಬ್ರವರಿ ಅಥವಾ ಎಪ್ರಿಲ್ ನಲ್ಲಿ  ಅಭಿಷೇಕ್ ಎಂಟ್ರಿ ಗಾಗಿ ಕೆಲಸ ಮಾಡುತ್ತಿದ್ದಾರೆ, ಅಭಿಷೇಕ್ ಕೂಡ ವೃತ್ತಿಯನ್ನು ಗಂಭೀರವಾಗಿ ಪರಿಣಿಸಿದ್ದಾನೆ. ಅಭಿಷೇಕ್ ಮೊದಲ ಸಿನಿಮಾ ಸದಾ ನೆನಪಿನಲ್ಲುಳಿವಂತಾಗಬೇಕು ಎಂದು ತಿಳಿಸಿದ್ದಾರೆ.
ಈ ವೃತ್ತಿಯ ಕಡೆ ಗಮನ ಹರಿಸದಂತೆ,ಹಾಗೂ ಈ ವೃತ್ತಿಯನ್ನು ಆಯ್ಕೆ ಮಾಡದಂತೆ ನಾವು ಯಾವಾಗಲೂ ಆತನಿಗೆ ಹೇಳುತ್ತಿದ್ದೆವು, ಆತನ ವಿದ್ಯಾಭ್ಯಾಸ ಪೂರ್ಣಗೊಳ್ಳುವ ವರೆಗೂ ಅವನಿಗೆ ಸಿನಿಮಾ ರಂಗದ ಬಗ್ಗೆ ಒಲವು ತೋರದಂತೆ ಆದೇಶಿಸಿದ್ದವು. ಸಿನಿಮಾ ರಂಗದಿಂದ ದೂರ ಉಳಿದು, ಲಂಡನ್ ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.
ಸಿನಿಮಾ ರಂಗದ ಇತ್ತೀಚೆಗಷ್ಟೇ ಅಭಿಷೇಕ್ ಒಲವು ತೋರಿದ್ದಾನೆ. ಹೀಗಾಗಿ ತಮ್ಮ ಬೆಂಬಲವಿಲ್ಲದೇ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂದು ನಾವು ಆತನಿಗೆ ಹೇಳಿದ್ದೇವೆ, ಅಂಬರೀಷ್ ಬೇರೆ ತಂದೆಯರ ರೀತಿಯಲ್ಲ, ನಾವು ಅವನನ್ನು ಲಾಂಚ್ ಮಾಡುತ್ತಿಲ್ಲ, ಒಂದು ವೇಳೆ ಯಾರಿಗಾದರೂ ಬೇಕಿದ್ದರೇ ಮಾತ್ರ ಅಲವರು ಅಭಿಶೇಕ್ ಗೆ ಅವಕಾಶ ನೀಡಬಹುದು. ಆತನ ಪ್ರತಿಭೆಯ ಮೇಲೆ ಆತನ ಯಶಸ್ಸು ಮತ್ತು ವೈಫಸಲ್ಯ ನಿಂತಿದೆ, ಮೊದಲ ಸಿನಿಮಾಗೂ ಮುನ್ನವೇ ಅಭಿಷೇಕ್ ಗೆ ಈಗಾಗಲೇ ಬೇಡಿಕೆ ಹೆಚ್ಚಿದೆ, ಅವನಿಗೆ ದೊರೆತ ಈ ಅವಕಾಶವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತಾನೆ ಎಂಬುದನ್ನು ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ. 
SCROLL FOR NEXT