ಬೆಂಗಳೂರು: ಒಂದು ಮೊಟ್ಟೆಯ ಕಥೆ ಮೂಲಕ ಸ್ಯಾಂಡಲ್ ವುಡ್ ಪ್ರಸಿದ್ದಿಯಾಗಿರುವ ರಾಜ್ ಬಿ ತಮ್ಮ ಎರಡನೇ ಸಿನಿಮಾದಲ್ಲಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಆದರೆ ರಾಜ್ ಅವರ ಮೂರನೇ ಸಿನಿಮಾ ಸ್ವಲ್ಪ ಇಂಟರೆಸ್ಟಿಂಗ್ ಆಗಿದೆ, ಪಾರ್ವತಮ್ಮ ರಾಜ್ ಕುಮಾರ್ ಪ್ರೊಡಕ್ಷನ್ ಹೌಸ್ ನ ಪಿಆರ್ ಕೆ ಪ್ರೊಡಕ್ಷನ್ ನ ಮುಂದಿನ ಸಿನಿಮಾದಲ್ಲಿ ರಾಜ್ ನಾಯಕನಾಗಿ ನಟಿಸಲಿದ್ದಾರೆ.
ಪಿಆರ್ ಕೆ ಪ್ರೊಡಕ್ಷನ್ ನ ಎರಡನೇ ಸಿನಿಮಾವನ್ನು ನಟ ಪುನೀತ್ ಪ್ರಕಟಿಸಿದ್ದು, ರಾಧಾ ಕೃಷ್ಣ ರೆಡ್ಡಿ ನಿರ್ದೇಶನ ಮಾಡಲಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಪುನೀತ್ ಅಧಿಕೃತ ಘೋಷಣೆ ಮಾಡಿಲ್ಲ, ನಿರ್ದೇಶಕರು ಇನ್ನೂ ಚಿತ್ರಕಥೆ ಸಿದ್ಧ ಪಡಿಸುತ್ತಿದ್ದು ಎಲ್ಲವೂ ಸಿದ್ಧವಾದ ನಂತರ ಅಧಿಕೃತ ಘೋಷಣೆ ಹೊರಬೀಳಲಿದೆ, ಆದರೆ ಚಿತ್ರತಂಡ ರಾಜ್ ಅವರನ್ನೇ ನಾಯಕನಟನಾಗಿ ಆಯ್ಕೆ ಮಾಡಲು ನಿರ್ಧರಿಸಿದೆ.
ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಲು ಪುನೀತ್ ಉತ್ಸುಕರಾಗಿದ್ದು, ಮೊದಲ ಬಾರಿಗೆ ಹೇಮಂತ್ ರಾವ್ ನಿರ್ದೇಶನ ಕವಲು ದಾರಿ ನಿರ್ಮಿಸುತ್ತಿದ್ದಾರೆ, ರಿಷಿ ಮತ್ತು ಅನಂತ್ ನಾಗ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.