ಗುರುನಂದನ್ 
ಸಿನಿಮಾ ಸುದ್ದಿ

ಸೌಂದರ್ಯ ಜಗದೀಶ್ ನಿರ್ಮಾಣದಲ್ಲಿ ಗುರುನಂದನ್ ಮುಂದಿನ ಚಿತ್ರ!

ಫಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪರಿಚಿತರಾಗಿದ್ದ ಗುರುನಂದನ್ ಸದ್ಯ ರಾಜು ಕನ್ನಡ ಮಿಡಿಯಂ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದು ಈ ಮಧ್ಯೆ ರಘುರಾಂ...

ಫಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪರಿಚಿತರಾಗಿದ್ದ ಗುರುನಂದನ್ ಸದ್ಯ ರಾಜು ಕನ್ನಡ ಮಿಡಿಯಂ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದು ಈ ಮಧ್ಯೆ ರಘುರಾಂ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. 
ಈ ಎರಡು ಚಿತ್ರಗಳ ನಂತರ ಗುರುನಂದನ್ ಇದೀಗ ಛಾಯಾಗ್ರಾಹಕರಾಗಿದ್ದ ಮನೋಹರ್ ಜೋಷಿ ಅವರು ನಿರ್ದೇಶಕನಕ್ಕೆ ಮುಂದಾಗಿದ್ದು ಈ ಚಿತ್ರದಲ್ಲಿ ಗುರುನಂದನ್ ಅಭಿನಯಿಸಲಿದ್ದಾರಂತೆ. ಇನ್ನು ಈ ಚಿತ್ರವನ್ನು ಸೌಂದರ್ಯ ಜಗದೀಶ್ ನಿರ್ಮಿಸಲಿದ್ದಾರಂತೆ. ಮೊದಲಿಗೆ ರಾಜು ಕನ್ನಡ ಮೀಡಿಯಂ ಚಿತ್ರ ಬಿಡುಗಡೆಯಾದ ನಂತರ ಚಿತ್ರದ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದೆ. 
ಸದ್ಯ ಗುರುನಂದನ್ ಆ ಚಿತ್ರದ ಪಾತ್ರಕ್ಕಾಗಿ ಕಸರತ್ತು ಶುರುಮಾಡಿದ್ದಾರೆ. ಸೌಂದರ್ಯ ಜಗದೀಶ್ ಅವರು ಬೇರೆ ಪ್ರಾಜೆಕ್ಟ್ ಗಳಲ್ಲಿ ಬಿಜಿಯಾಗಿರುವುದರಿಂದ ಆ ಎಲ್ಲಾ ಯೋಜನೆಗಳು ಮುಗಿದ ನಂತರ ಹೊಸ ಚಿತ್ರ ಸೆಟ್ಟೇರಲಿದೆ. 
ಗುರುನಂದನ್ ಅಭಿನಯದ ರಾಜು ಕನ್ನಡ ಮೀಡಿಯಂ ಚಿತ್ರ ಸದ್ಯ ಸೆನ್ಸಾರ್ ಬೋರ್ಡ್ ಮುಂದಿದೆ. ಚಿತ್ರವನ್ನು ಅಕ್ಟೋಬರ್ 27ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ. ಫಸ್ಟ್ ರ್ಯಾಂಕ್ ರಾಜು ಚಿತ್ರವನ್ನು ನಿರ್ದೇಶಿಸಿದ್ದ ನರೇಶ್ ಕುಮಾರ್ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ