ಸಾಹೋ ಚಿತ್ರದ ಹೊಸ ಪೋಸ್ಟರ್ 
ಸಿನಿಮಾ ಸುದ್ದಿ

ಪ್ರಬಾಸ್ ಹುಟ್ಟುಹಬ್ಬದ ದಿನವೇ ಸಾಹೋ ಮೊದಲ ಪೋಸ್ಟರ್ ಬಿಡುಗಡೆ

ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ತೆಲುಗಿನ ಬಹುನಿರೀಕ್ಷಿತ 'ಸಾಹೊ' ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಹೈದರಾಬಾದ್: ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ತೆಲುಗಿನ ಬಹುನಿರೀಕ್ಷಿತ 'ಸಾಹೊ' ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ನಟ ಪ್ರಭಾಸ್ ಅವರ ಹುಟ್ಟುಹಬ್ಬದ ದಿನವಾದ ಇಂದು ಅಂದರೆ ಅಕ್ಟೋಬರ್ 23ರಂದು ಅವರ ನಟನೆಯ ಬಹು ನಿರೀಕ್ಷಿತ ಮತ್ತು ಬಹುಕೋಟಿ ವೆಚ್ಚದ ಸಾಹೊ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಸಾಹೋ  ಚಿತ್ರತಂಡ ವಿಶಿಷ್ಟವಾಗಿ ಅವರ ಜನುಮ ದಿನಕ್ಕೆ ಶುಭಾಶಯ ಕೋರಿದೆ. 
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ಸಾಹೋ ಚಿತ್ರದ ಪೋಸ್ಟರ್ ಚಿತ್ರದ ಕುರಿತ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಈ ಪೋಸ್ಟರ್‌ನಲ್ಲಿ ಪ್ರಭಾಸ್ ಅವರು ಕಪ್ಪುಬಣ್ಣದ ಗೌನ್ ಧರಿಸಿ, ಮುಖಕ್ಕೆ  ಬಟ್ಟೆ ಕಟ್ಟಿಕೊಂಡು ರಸ್ತೆಯಲ್ಲಿ ನಡೆದುಬರುತ್ತಿರುವಂತೆ ಖಡಕ್ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್‌ ಅನ್ನು ಖ್ಯಾತ ಸಿನಿಮಾ ವಿಮರ್ಶಕ ಹಾಗೂ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಟ್ವೀಟ್ ಮಾಡಿದ್ದಾರೆ.
ಪೋಸ್ಚರ್ ಕದ್ದರೇ ಸಾಹೋ ನಿರ್ದೇಶಕರು
ಇನ್ನು ಅತ್ತ ಸಾಮಾಜಿಕ ಜಾಲತಾಣಗಳಲ್ಲಿ ಸಾಹೋ ಚಿತ್ರದ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆಯೇ ಇತ್ತ ಚಿತ್ರದ ನಿರ್ದೇಶಕ ಸುಜೀತ್ ರೆಡ್ಡಿ ಮೇಲೆ ಪೋಸ್ಟರ್ ಕದ್ದ ಆರೋಪ ಕೇಳಿಬರುತ್ತಿದೆ. ಪ್ರಸ್ತುತ ನಿರ್ದೇಶಕರು ಬಿಡುಗಡೆ  ಮಾಡಿರುವ ಸಾಹೋ ಚಿತ್ರದ ಪೋಸ್ಟರ್ ಇಂಗ್ಲೀಷ್ ನ 'ಬ್ಲೇಡ್ ರನ್ನರ್: 2049' ಚಿತ್ರದ ಪೋಸ್ಟರ್ ನಂತೆಯೇ ಇದೆ. ಈ ಚಿತ್ರದಲ್ಲೂ ನಟ ರಿಯಾನ್ ಗಾಸ್ಲಿಂಗ್ ಅವರು ಕೂಡ ಪ್ರಭಾಸ್ ಧರಿಸಿರುವ ಧಿರಿಸಿನಂತೆಯೇ ಅರ್ಧ ಮುಖ  ಮುಚ್ಚಿ ನಡೆಯುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.
ಹೀಗಾಗಿ ಸಾಹೋ ಚಿತ್ರ 'ಬ್ಲೇಡ್ ರನ್ನರ್: 2049'ನ ರಿಮೇಕೇ? ಅಥವಾ ಪೋಸ್ಟರ್ ಮಾತ್ರ ಹಾಗಿದೆಯೇ ಎಂಬ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. 'ಬ್ಲೇಡ್ ರನ್ನರ್: 2049' ಚಿತ್ರ ವೈಜ್ಞಾನಿಕ ಕಥಾ ಹಂದರವುಳ್ಳ ಚಿತ್ರವಾಗಿದ್ದು, ಈ  ಹಿಂದೆ ತೆರಕಂಡಿದ್ದ 1982 ಕ್ಲಾಸಿಕ್ ಚಿತ್ರದ ಮುಂದುವರೆದ ಭಾಗವಾಗಿದೆ. 
ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರ 2018ರ ಏಪ್ರಿಲ್‌ನಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದು, ಸಾಹೊ ಚಿತ್ರವನ್ನು ನಿರ್ದೇಶಕ ಸುಜೀತ್ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!