ಚೆನ್ನೈ: ಡೆಂಗ್ಯೂ ಹರಡುವಿಕೆಯನ್ನು ತಡೆಗಟ್ಟಲು ಬಳಕೆ ಮಾಡಲಾಗುವ ಗಿಡಮೂಲಿಕೆ ನಿಲವೇಂಬು ಕುಡಿನೀರ್ ನ್ನು ಹಂಚದಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿ ನಟ ಕಮಲ ಹಾಸನ್ ಟ್ವೀಟ್ ಮಾಡಿದ್ದು, ಈ ಸಂಬಂಧ ಕ್ರಿಮಿನಲ್ ಪ್ರಕರಣ ಎದುರಿಸುವ ಸಾಧ್ಯತೆ ಇದೆ.
ಗಿಡಮೂಲಿಕೆಗಳ ಫಲಕಾರಿತ್ವದ ಬಗ್ಗೆ ವಿವಾದ ಉಂಟಾಗಿದ್ದು, ಕಮಲ್ ಹಾಸನ್ ಟ್ವೀಟ್ ಗೆ ಸಂಬಂಧಿಸಿದಂತೆ ಅಡ್ವೊಕೇಟ್ ಜಿ. ದೇವರಾಜನ್ ಎಂಬುವವರು ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿರುವ ನ್ಯಾ.ಎಂಎಸ್ ರಮೇಶ್ ಮೇಲ್ನೋಟಕ್ಕೆ ಅಪರಾಧ ಕಂಡುಬಂದರೆ ಪ್ರಕರಣ ದಾಖಲಿಸುವಂತೆ ಚೆನ್ನೈ ಸಿಟಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಡೆಂಗ್ಯೂ ತಡೆಗಟ್ಟಲು ಬಳಕೆ ಮಾಡುತ್ತಿರುವ ಗಿಡಮೂಲಿಕೆಗಳಿಂದ ಅಡ್ಡಪರಿಣಾಮಗಳು ಉಂತಾಗುತ್ತವೆ, ಆದ್ದರಿಂದ ಆ ಗಿಡಮೂಲಿಕೆಗಳನ್ನು ಬಳಕೆ ಮಾಡದಂತೆ ಅಭಿಮಾನಿಗಳಿಗೆ ಕಮಲ್ ಹಾಸನ್ ಕರೆ ನೀಡಿದ್ದರು. ಗಿಡಮೂಲಿಕೆಯ ಬಗ್ಗೆ ಟ್ವೀಟ್ ಮಾಡಿರುವ ಕಮಲ್ ಹಾಸನ್, ಅದರಿಂದ ಅಡ್ದ ಪರಿಣಾಮಗಳು ಉಂಟಾಗುತ್ತವೆ ಎಂಬುದಕ್ಕೆ ನಿರ್ದಿಷ್ಟ ಆಧಾರ ನೀಡಿಲ್ಲ. ಒಂದು ವೇಳೆ ಕಮಲ ಹಾಸನ್ ಅವರೇ ನಿಲವೇಂಬು ಕುಡಿನೀರ್ ನ್ನು ಸೇವಿಸಿ ಅಡ್ಡಪರಿಣಾಮ ಎದುರಿಸಿದ್ದರೆ ಅದರ ಬಗ್ಗೆ ಮಾಹಿತಿ ನೀಡಿ ನಂತರ ಹೇಳಬೇಕಿತ್ತು ಎಂದು ಅಡ್ವೊಕೇಟ್ ಜಿ.ದೇವರಾಜನ್ ಹೇಳಿದ್ದಾರೆ.