ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್
ಬೆಂಗಳೂರು: ಕಂಬೈನ್ಸ್ ಅಡಿಯಲ್ಲಿ ಪುನೀತ್ ಗಾಗಿ ಸಿನಿಮಾ ಮಾಡಲು ಸಹೋದರ ರಾಘವೇಂದ್ರ ರಾಜ್ ನಟ ಪುನೀತ್ ರಾಜ್ ಕುಮಾರ್ ಈಗಾಗಲೇ ತಮ್ಮದೇ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಹಲವು ಸಿನಿಮಾ ಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದೇ ವೇಳೆ, ವಜ್ರೇಶ್ವರಿ ಕುಮಾರ್ ನಿರ್ಧರಿಸಿದ್ದಾರೆ.
ತಮ್ಮ ತಾಯಿ ಪಾರ್ವತಮ್ಮ ರಾಜ್ ಕುಮಾರ್ ನಿಧನದ ನಂತರ ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿರುವ ರಾಘಣ್ಣ ಸೂಕ್ತ ಕಥೆಗಾಗಿ ಹುಡುಕಾಟ ನಡೆಸಿದ್ದಾರೆ. ಕಥೆ ಸಿಕ್ಕ ನಂತರ ಚಿತ್ರ ನಿರ್ಮಿಸಿ ಅದನ್ನು ತಮ್ಮ ತಾಯಿ ಪಾರ್ವತಮ್ಮ ಅವರಿಗೆ ಸಮರ್ಪಿಸುವುದಾಗಿ ಹೇಳಿದ್ದಾರೆ.
ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ರಾಘಣ್ಣ, ತಮ್ಮ ಬಾಲ್ಯದ ಫೋಟೋ ಕೂಡ ಶೇರ್ ಮಾಡಿದ್ದಾರೆ. ಅಪ್ಪು ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿರುವುದು, ನನ್ನಲ್ಲಿ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚಿಸಿದೆ, ನನ್ನ ಅನಾರೋಗ್ಯದ ನಂತರ ಈ ಪ್ರಾಜೆಕ್ಟ್ ಗೆ ಅಪ್ಪು ಮತ್ತಷ್ಟು ಶಕ್ತಿ ತುಂಬಿದ್ದಾರೆ ಎಂದು ಹೇಳಿದ್ದಾರೆ.
ಕಥೆ ಎಲ್ಲಕ್ಕಿಂತ ಮುಖ್ಯ ಎಂಬುದು ನಿರ್ಮಾಪಕರ ನಂಬಿಕೆ, ಈ ಪಾಠವನ್ನು ನನ್ನ ತಂದೆಯಿಂದ ಕಲಿತಿದ್ದೇನೆ, ನಮ್ಮ ಕೈಯ್ಯಲ್ಲಿ ಉತ್ತಮ ಕಥೆಯಿದ್ದರೇ ಎಲ್ಲವು ಬಂದು ಸರಿಯಾದ ಸ್ಥಳದಲ್ಲಿ ಕೂರುತ್ತದೆ ಎಂಬುದು ನನ್ನ ವಿಶ್ವಾಸ, ಜೊತೆಗೆ ಸೂಕ್ತ ಕಲಾವಿದರು ಹಾಗೂ ತಂತ್ರಜ್ಞರು ಕೂಡ ಬರುತ್ತಾರೆ. ಸದ್ಯ ನಾನು ಹಲವು ಕಥೆಗಳನ್ನು ಕೇಳುತ್ತಿದ್ದೇನೆ, ಹಲವು ನಿರ್ದೇಶಕರು ಹಾಗೂ ಅಭಿಮಾನಿಗಳು ಬಂದು ನಮಗಾಗಿ ಕಥೆ ಹೇಳುತ್ತಿದ್ದಾರೆ,. ಮೊದಲು ನೀವು ಕಥೆ ಕೇಳಿ, ಅದರಲ್ಲಿ ಯಾವುದಾದರೂ ಅಸಕ್ತಿದಾಯಕ ಎನಿಸಿದರೇ ನಂತರ ನಾನು ಕಥೆ ಕೇಳುವುದಾಗಿ ಅಪ್ಪು ಹೇಳಿದ್ದಾರೆ ಎಂದು ರಾಘಣ್ಣ ವಿವರಿಸಿದ್ದಾರೆ.
ಯಾವುದೇ ನಿರ್ದೇಶಕರ ಹಿಂದಿನ ಸಿನಿಮಾಗಳು ನಮಗೆ ಮಾನದಂಡವಾಗುವುದಿಲ್ಲ, ಒಮ್ಮೊಮ್ಮೆ ಕೆಲ ನಿರ್ದೇಶಕರು ಹಿಟ್ ಸಿನಿಮಾ ನೀಡಿದ್ದರೇ ಅದು ನಮಗೆ ಬೇಕಿಲ್ಲ, ನಮ್ಮ ದೂರದೃಷ್ಟಿಯನ್ನು ಹಂಚಿಕೊಳ್ಳುವ ಉತ್ತಮ ತಂತ್ರಜ್ಞರು ಬೇಕು. ನಾವು ನಿರ್ದೇಶಕರಿಗಾಗಿ ಹುಡುಕಾಟ ನಡೆಸಿದ್ದೇವೆ, ನಮ್ಮ ತಂದೆಯಿಂದ ನಾವು ನಟನೆ ಕಲಿತಿದ್ದೇವೆಸ ಆದರೆ ನಮ್ಮ ತಾಯಿ ವಜ್ರೇಶ್ವರಿ ಕಂಬೈನ್ಸ್ ಎಂಬ ಬಹುದೊಡ್ಡ ಪ್ರೊಡಕ್ಷನ್ ಹೌಸ್ ಆರಂಭಿಸಿದವರು, ಇದರ ಮೂಲಕ ಹಲವು ನಟ, ನಟಿಯರು, ಕಲಾವಿದರು, ನಿರ್ದೇಶಕರು ಹಾಗೂ ತಂತ್ರಜ್ಞರನ್ನು ಕನ್ನಡ ಚಿತ್ರೋದ್ಯಮಕ್ಕೆ ನೀಡಿದ್ದಾರೆ.
ವಜ್ರೇಶ್ವರಿ ಬ್ಯಾನರ್ ಅಡಿಯಲ್ಲಿ, ಶಂಕರ್ ಗುರು, ಜೀವನ ಚೈತ್ರ, ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈ ಸಿನಿಮಾಗಳು ಸುಮಾರು 1 ವರ್ಷದ ಕಾಲ ಥಿಯೇಟರ್ ನಲ್ಲಿ ಪ್ರದರ್ಶನಗೊಂಡಿವೆ.
ನಮ್ಮ ತಂದೆ ಹಾಗೂ ಶಿವಣ್ಣ ಅವರಿಗೆ ನೀಡಿದಂತ ಹಿಟ್ ಸಿನಿಮಾಗಳನ್ನೇ ಅಪ್ಪುಗೂ ಅಂಥಹದ್ದೇ ಹಿಟ್ ಸಿನಿಮಾ ನೀಡಬೇಕು ಎಂಬುವ ಆಸೆ ನನ್ನದಾಗಿದೆ, ಇದು ನನ್ನ ತಾಯಿಯ ಆಸೆಯೂ ಕೂಡ, ಆದರೆ ಇಲ್ಲಿ ಯಾವುದೇ ಮ್ಯಾಜಿಕ್ ನಡೆಯುವುದಿಲ್ಲ, ಆದರೆ ನನಗೆ ಉತ್ತಮವಾಗಿದೆ ಎನಿಸಿದ್ದನ್ನು ನಾನು ನೀಡುತ್ತೇನೆ ಎಂದು ಹೇಳಿದ್ದಾರೆ.
ಮುಂದಿನ ವರ್ಷದಲ್ಲಿ ಈ ಪ್ರಾಜೆಕ್ಟ್ ಆರಂಭವಾಗಲಿದೆ, ಮುಂದಿನ ವರ್ಷದ ಮೇ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ, ಎಲ್ಲವೂ ಸಿದ್ದವಾಗುವ ಮುನ್ನವೇ ನಾನು ಅಧಿಕೃತವಾಗಿ ಘೋಷಿಸಲು ಸಾಧ್ಯವಿಲ್ಲ ಇದು ನನ್ನ ತತ್ವವಾಗಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos