ವಿಕ್ಕಿ 
ಸಿನಿಮಾ ಸುದ್ದಿ

ಓರ್ವ ನಟನಾಗಿ, ನನ್ನ ಸಾಮರ್ಥ್ಯದ ಬಗ್ಗೆ ನನಗೆ ಗೊತ್ತಿರಬೇಕು: ವಿಕ್ಕಿ

ಕೆ ವಿಕ್ಕಿಯವರಿಗೆ ಲಕ್ಕಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಸೂರಿ ನಿರ್ದೇಶನದ ಕೆಂಡಸಂಪಿಗೆ ....

ಬೆಂಗಳೂರು: ಕೆ ವಿಕ್ಕಿಯವರಿಗೆ ಲಕ್ಕಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದಲ್ಲಿ ತಮ್ಮ ನಟನಾ ಸಾಮರ್ಥ್ಯ ತೋರಿಸಿದ್ದ ಹೊಸ ಮುಖ ವಿಕ್ಕಿ ಕಾಲೇಜ್ ಕುಮಾರ್ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಮತ್ತೆ ಪ್ರವೇಶಿಸಿದ್ದಾರೆ. ಚಿತ್ರದ ಟ್ರೇಲರ್ ಪ್ರೇಕ್ಷಕರ ಮನಗೆದ್ದಿದೆ.
ಈ ಚಿತ್ರದ ನಟನೆ ನಂತರ ವಿಕ್ಕಿಯವರಿಗೆ ಹಲವು ಚಿತ್ರಗಳ ಆಫರ್ ಗಳು ಬರುತ್ತಿದ್ದರೂ ಕೂಡ ಆಯ್ಕೆಯತ್ತ ಗಮನಹರಿಸುತ್ತಿದ್ದಾರೆ. ಕೆಂಡಸಂಪಿಗೆ ಬಂದು ಸುಮಾರು ಎರಡು ವರ್ಷಗಳ ನಂತರ ಕಾಲೇಜ್ ಕುಮಾರ ಚಿತ್ರದಲ್ಲಿ ಅಭಿನಯಿಸಿರುವ ವಿಕ್ಕಿ ಇಷ್ಟು ನಿಧಾನ ಮಾಡಿರುವುದಕ್ಕೆ ಕಾರಣ ನೀಡುತ್ತಾರೆ.
ನಿರ್ದೇಶಕನಾಗಬೇಕೆಂಬ ಆಸೆಯಿಂದ ಚಿತ್ರರಂಗಕ್ಕೆ ಬಂದ ನಾನು ಸೂರಿಯವರ ಜೊತೆ ಕೆಲಸ ಮಾಡಲು ಆರಂಭಿಸಿದೆ. ಅವರು ನಾನು ನಟನಾಗಬಹುದೆಂದು ಗುರುತಿಸಿ ಕೆಂಡಸಂಪಿಗೆಯನ್ನು ಮಾಡಿಸಿದರು. ಎರಡನೇ ಚಿತ್ರಕ್ಕೆ ಸಹಿ ಮಾಡುವ ಮುನ್ನ ನಿರ್ದೇಶಕನಾಗಬೇಕೆ ಅಥವಾ ನಟನೆಯಲ್ಲಿ ಮುಂದುವರಿಯಬೇಕೆ ಎಂದು ನನಗೆ ಗೊಂದಲವುಂಟಾಯಿತು. ನಟನೆಯಲ್ಲಿ ಸ್ವಲ್ಪ ವರ್ಷಗಳ ಕಾಲ ಇರುವಂತೆ ಕೆಲವು ಸ್ನೇಹಿತರು ಸಲಹೆ ನೀಡಿದರು. ಹೀಗಾಗಿ ಕಾಲೇಜು ಕುಮಾರದಲ್ಲಿ ಅಭಿನಯಿಸಿದೆ ಎನ್ನುತ್ತಾರೆ.
ನಟನಾಗಿ ನನ್ನ ಸಾಮರ್ಥ್ಯದ ಬಗ್ಗೆ ನನಗೆ ತಿಳಿದಿರಬೇಕು. ನನ್ನನ್ನು ಯಾರೂ ಹೀರೊ ತರ ಪರಿಗಣಿಸುವುದಿಲ್ಲ. ಪಕ್ಕದ ಮನೆಯ ಹುಡುಗನ ತರಹ ನನ್ನನ್ನು ಪರಿಗಣಿಸುತ್ತಾರೆ. ಹೀರೋನಾದವನಿಗೆ ಉತ್ತಮ ಶರೀರ, ಒಂದು ಸೂಕ್ತ ದೈಹಿಕ ಭಾಷೆ ಮತ್ತು ಇಮೇಜ್ ಇರಬೇಕು ಇವೆಲ್ಲ ನನ್ನಲ್ಲಿಲ್ಲ, ಆದರೆ ನನ್ನಲ್ಲಿ ಬೇರೆ ನಟರಲ್ಲಿ ಇಲ್ಲದಂತಹ ಗುಣವನ್ನು ಪ್ಲಸ್ ಆಗಿ ತೆಗೆದುಕೊಳ್ಳುತ್ತೇನೆ. ಜನರು ನನ್ನನ್ನು ಸೋದರನಾಗಿ, ಸ್ನೇಹಿತನಾಗಿ ಮತ್ತು ಮನೆಯ ಮಗನಾಗಿ ಕಾಣುತ್ತಾರೆ ಎನ್ನುತ್ತಾರೆ ವಿಕ್ಕಿ.
ಮುಂದಿನ ಚಿತ್ರಕ್ಕೆ ರಾಮ ರಾಮ ರೆ ಖ್ಯಾತಿಯ ಸತ್ಯಪ್ರಕಾಶ್ ಸ್ಕೃಪ್ಟ್ ಬರೆದಿದ್ದು ಅದರಲ್ಲಿ ನಟಿಸುವ ಸಾಧ್ಯತೆಯಿದೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT