ಸಿನಿಮಾ ಸುದ್ದಿ

'ರಾಮಾ ರಾಮಾ ರೇ' ಸತ್ಯಪ್ರಕಾಶ್ ಮುಂದಿನ ಸಿನಿಮಾಗೆ ಜರ್ಮನ್ ಸಹಯೋಗ

Shilpa D
ಬೆಂಗಳೂರು: ಡಿ. ಸತ್ಯಪ್ರಕಾಶ್ ನಿರ್ದೇಶನದ  ರಾಮಾ ರಾಮಾ ರೇ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದು.ಪ್ರಪಂಚದ ವಿವಿಧ ದೇಶಗಳಲ್ಲಿ 150 ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಪ್ರದರ್ಶನ ಕಂಡಿದೆ.
ಈ ಸಿನಿಮಾವನ್ನು ತಮ್ಮ ದೇಶಗಳ ಭಾಷೆಗೆ ರಿಮೇಕ್ ಮಾಡಲು ಉತ್ಸುಕರಾಗಿರುವ ಹಲವು ನಿರ್ಮಾಪಕರು ಸಿನಿಮಾ ರೈಟ್ಸ್ ಪಡೆಯಲು ಬಯಸಿದ್ದಾರೆ ಎಂದು ನಿರ್ದೇಶಕ ಸತ್ಯಪ್ರಕಾಶ್ ತಿಳಿಸಿದ್ದಾರೆ.
ತಮ್ಮ ಮುಂದಿನ ಸಿನಿಮಾಗೆ ಅಂತರರಾಷ್ಟ್ರೀಯ ಸಹಯೋಗ ಲಭಿಸಿರುವುದಕ್ಕೆ ಅವರು ಸಂತಸ ವ್ಯಕ್ತ ಪಡಿಸಿದ್ದಾರೆ. ಜರ್ಮನಿಯ ಉಮಾಪತಿ ಎಂಬುವರು ಮುಂದಿನ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿ ವಹಿಸಿದ್ದಾರೆ.
ರಾಮಾ ರಾಮಾ ರೇ ಸಿನಿಮಾ ವೀಕ್ಷಿಸಿರುವ ಅವರು, ತನ್ನ ಮುಂದಿನ ಸಿನಿಮಾಗೆ ಬಂಡವಾಳ ಹೂಡುವುದಾಗಿ ಹೇಳಿದ್ದಾರೆ.
ನಿರ್ಮಾಪಕರಿಗೆ ಚಿತ್ರಕಥೆ ಹಿಡಿಸಿದ್ದು, ಚರ್ಚೆಗಳು ನಡೆಯುತ್ತಿವೆ. ತಿಂಗಳೊಳಗೆ ಎಲ್ಲವೂ ನಿರ್ಧರಿತಗೊಳ್ಳುತ್ತದೆ, ನಾನು ಕಥೆಯನ್ನು ನಿರ್ಮಾಪಕರಿಗೆ ಕಳುಹಿಸಿದ್ದೇನೆ,  ಈಗಾಗಲೇ ಶೇ. 70ರಷ್ಟು ಪೂರ್ಣಗೊಂಡಿದೆ. ಮುಂದಿನ ಮಾತುಕತೆಯಲ್ಲಿ  ಷರತ್ತುಗಳ ಬಗ್ಗೆ ಮಾತನಾಡುತ್ತೇನೆ ಎಂದು ಸತ್ಯ ಪ್ರಕಾಶ್ ತಿಳಿಸಿದ್ದಾರೆ.
ಉಮಾಪತಿ ಅವರ ಜೊತೆ ನಾನು ಮಾತನಾಡಿದ್ದೇನೆ. ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ, ಮುಂದಿನ ಎರಡು ತಿಂಗಳುಗಳಲ್ಲಿ ಚಿತ್ರಕಥೆ ಮತ್ತು ಕಲಾವಿದರ ಆಯ್ಕೆ ಅಂತಿಮಗೊಳ್ಳಲಿದೆ ಎಂದು ಹೇಳಿದ್ದಾರೆ.
ಈ ಸಿನಿಮಾದಲ್ಲಿ ಎಲ್ಲಾ ರೀತಿಯ ವಿಷಯಗಳು ಸೇರಿಕೊಂಡಿವೆ. ಮುಗ್ಧ ಜನರು ಸಿನಿಮಾವನ್ನು ಇಷ್ಟ ಪಡುತ್ತಾರೆ, ಸಿನಿಮಾ ನೋಡಿದ ನಂತರ ಪ್ರೇಕ್ಷಕರು ಸಿನಿಮಾ ತಮ್ಮ ಮುಗ್ಧತೆಯನ್ನು ಹಾಗೆ ಉಳಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
SCROLL FOR NEXT