ಕಾವ್ಯ ಮಾಧವನ್ 
ಸಿನಿಮಾ ಸುದ್ದಿ

ಮಲೆಯಾಳಂ ನಟಿ ಅಪಹರಣ: ನಿರೀಕ್ಷಣಾ ಜಾಮೀನು ಕೋರಿದ ನಟ ದಿಲೀಪ್ ಪತ್ನಿ ಕಾವ್ಯ ಮಾಧವನ್

ಹಲವು ಕನ್ನಡ ಚಿತ್ರಗಳಲ್ಲೂ ನಟಿಸಿರುವ ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ...

ಕೊಚ್ಚಿ: ಹಲವು ಕನ್ನಡ ಚಿತ್ರಗಳಲ್ಲೂ ನಟಿಸಿರುವ ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟ ದಿಲೀಪ್ ಅವರ ಪತ್ನಿ ಕಾವ್ಯ ಮಾಧವನ್ ಅವರು ನಿರೀಕ್ಷಣಾ ಜಾಮೀನು ಕೋರಿ ಶನಿವಾರ ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಮಲೆಯಾಳಂ ನಟಿ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಈಗಾಗಲೇ ಒಂದು ಬಾರಿ ಪೊಲೀಸ್ ವಿಚಾರಣೆ ಎದುರಿಸಿರುವ ಕಾವ್ಯ ಮಾಧವನ್ ಅವರನ್ನು ತನಿಖೆ ತಂಡ ಬಂಧಿಸುವು ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಂದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಅಲಿಯಾಸ್ ಸುನಿಲ್ ಕುಮಾರ್ ಗೂ ಹಾಗೂ ಕಾವ್ಯಾ ಮಾಧವನ್ ಗೂ ಸಂಪರ್ಕವಿರುವ ಬಗ್ಗೆ ಸಾಕ್ಷ್ಯಗಳು ದೊರೆತಿವೆ ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.
ತನಿಖಾ ತಂಡದ ಪ್ರಕಾರ, ಕಳೆದ ಫೆಬ್ರವರಿಯಲ್ಲಿ ನಟಿಯನ್ನು ಅಪಹರಿಸುವ ಮುನ್ನ ಕಾವ್ಯ ಮಾಧವನ್ ಅವರ ಮನೆಗೆ ಭೇಟಿ ನೀಡಿದ್ದ ಪಲ್ಸರ್ ಸುನಿ, ಅವರ ತಾಯಿಯಿಂದ 25 ಸಾವಿರ ರುಪಾಯಿ ಮುಂಗಡ ಪಡೆದಿದ್ದ ಎನ್ನಲಾಗಿದೆ.
ಈ ಹಿಂದೆ ಪೊಲೀಸರು ಕಾವ್ಯ ಮಾಧವನ್ ಅವರನ್ನು ದಿಲೀಪ್ ಅವರ ಸ್ವಗೃಹದಲ್ಲಿಯೇ ವಿಚಾರಣೆಗೊಳಪಡಿಸಿದ್ದು, 6 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಕಾವ್ಯಾ ಅವರು ಹಲವು ಬಾರಿ ಕಣ್ಣೀರು ಹಾಕಿರುವುದಾಗಿ ತಿಳಿದುಬಂದಿತ್ತು.
ಫೆ.17 ರಂದು ರಾತ್ರಿ 7.30 ರ ಸುಮಾರಿಗೆ ತ್ರಿಶೂರ್​ನಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಲಾಗಿತ್ತು. ನಂತರ ರಾತ್ರಿ ಪರಿವಟ್ಟಲಂ ಎಂಬಲ್ಲಿ ನಟಿಯನ್ನು ಕಾರಿನಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ನಂತರ ನಟಿ ನಿರ್ದೇಶಕರೊಬ್ಬರ ಮನೆಗೆ ತೆರಳಿ ಅಲ್ಲಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಪ್ರಕರಣ ಸಂಬಂಧ 11ನೇ ಆರೋಪಿಯಾಗಿ ನಟ ದಿಲೀಪ್ ಅವರನ್ನು ಜುಲೈ10 ರಂದು ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್‌ ಪ್ರತಿಭಟನೆಗೆ ಹೊಸ ಅಸ್ತ್ರ: ಆಳಂದ ಮತಗಳ್ಳತನ ಪ್ರಕರಣದಲ್ಲಿ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ CID ಚಾರ್ಜ್ ಶೀಟ್ ಸಲ್ಲಿಕೆ

ದೆಹಲಿಗೆ ಹೋಗುತ್ತಿರುವುದು ಶಕ್ತಿ ಪ್ರದರ್ಶನಕ್ಕಲ್ಲ,'ವೋಟ್ ಚೋರಿ' ಪ್ರತಿಭಟನೆಗೆ: ಡಿ ಕೆ ಶಿವಕುಮಾರ್, ನಾಳೆ ಸಿಎಂ ಪಯಣ

ಕರ್ನಾಟಕ ಅಕ್ರಮದ ಹಾದಿ ಹಿಡಿಯದಿರಲಿ: ಗೃಹ ಸಚಿವ ಪರಮೇಶ್ವರರ "ಧ್ವಂಸ" ಹೇಳಿಕೆಗೆ ಪಿ. ಚಿದಂಬರಂ ಕಿಡಿ!

ತಾಳ್ಮೆ ಕಳೆದುಕೊಂಡು ಪುಟಿನ್-ಎರ್ಡೋಗನ್ ನಡುವಿನ ರಹಸ್ಯ ಸಭೆಗೆ ನುಗ್ಗಿದ ಪಾಕ್ ಪ್ರಧಾನಿ; ಮುಂದೇನಾಯ್ತು?, Video!

'ಸಂಸ್ಕೃತದ ವ್ಯಾಕರಣ ಹುಟ್ಟಿದ್ದು ನಮ್ಮಲ್ಲೇ; ನಾವ್ಯಾಕೆ ಸಂಸ್ಕೃತ ಕಲಿಯಬಾರದು'?: Pak ವಿವಿಯಲ್ಲಿ ಮಹಾಭಾರತ, ಸಂಸ್ಕೃತದ ಕೋರ್ಸ್ ಆರಂಭ!

SCROLL FOR NEXT