ಬೆಂಗಳೂರು: 2004 ರಲ್ಲಿ ಡಾ. ವಿಷ್ಣು ವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಡಾ.ವಾಸು ಈಗ ಆಪ್ತಮಿತ್ರ ಎರಡನೇ ಭಾಗ ನಿರ್ದೇಶಿಸಲು ಹೊರಟಿದ್ದಾರೆ.
ಮಲಯಾಳಂ ಸಿನಿಮಾ ಮಣಿಚಿತ್ರತಾಜು ಮತ್ತು ತಮಿಳಿನ ಆರನ್ನಮೈ ಸಿನಿಮಾದಿಂದ ಪ್ರೇರಿತಗೊಂಡಿರುವ ವಾಸು ಆಪ್ತಮಿತ್ರ-2 ನಿರ್ದೇಶಿಸುತ್ತಿದ್ದಾರೆ.
ಆಪ್ತಮಿತ್ರದ ಮುಂದುವರಿದ ಭಾಗವನ್ನು ಸೂರಪ್ಪ ಬಾಬು ಅರ್ಪಿಸುತ್ತಿದ್ದು, ರಮೇಶ್ ಬಾಬು ನಿರ್ಮಾಣದ 21 ನೇ ಸಿನಿಮಾವಾಗಿದೆ, ವಿಷ್ಣುವರ್ದನ್ ಹುಟ್ಟುಹಬ್ಬದಂದು ಈ ಸಿನಿಮಾದ ಅಧಿಕೃತ ಟೈಟಲ್ ಘೋಷಿಸಲಾಗುವುದು, ಸದ್ಯ ವಾಸು ಚಿತ್ರಕಥೆ ಬರೆಯುವುದರಲ್ಲಿ ಮಗ್ನರಾಗಿದ್ದು, ನವೆಂಬರ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.
ನಿರ್ಮಾಪಕರು ಟೈಟಲ್ ಮತ್ತು ಕಥೆಗೆ ಸಲಹೆ ನೀಡಿದ್ದಾರೆ. ಶಬರಿಮಲೈ ಪ್ರವಾಸದಿಂದ ವಾಪಾಸಾದ ನಂತಕ ಕೆಲಸ ಆರಂಭವಾಗಲಿದೆ ಎಂದು ಹೇಳಿರುವ ವಾಸು, ಕಳೆದ 37 ವರ್ಷಗಳಿಂದ ಶಬರಿಮಲೆ ಯಾತ್ರೆಗೆ ಹೋಗಿ ಬರುತ್ತಿರುವುದಾಗಿ ತಿಳಿಸಿದ್ದಾರೆ.
ತಮ್ಮ ಸ್ನೇಹಿತ ವಿಷ್ಣುವರ್ಧನ್ ಹುಟ್ಟುಹಬ್ಬದ ವರ್ಷಾಚರಣೆ ವೇಳೆ ತಮ್ಮ ಆಪ್ತಮಿತ್ರನನ್ನ ಸ್ಮರಿಸಿಕೊಂಡಿರುವ ವಾಸು, ಕೇವಲ ಪ್ರೇಕ್ಷಕರು ಮತ್ತು ಸಿನಿಮಾ ಇಂಡಸ್ಟ್ರಿ ವಿಷ್ಣುವರ್ಧನ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ, ಎಲ್ಲರಿಗಿಂತ ಹೆಚ್ಚಾಗಿ ನಾನು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಅವರಿಗಾಗಿ ಹಲವು ಸಿನಿಮಾಗಳನ್ನು ಮಾಡುವುದನ್ನು ಬಿಟ್ಟೆ, ಏಕೆಂದರೇ ಅವರಿಗೆ ಸರಿಸಮನಾದ ನಟನನ್ನು ನಾನು ಕಾಣಲಿಲ್ಲ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಮಾತ್ರವಲ್ಲ, ಯಾವುದೇ ಭಾಷೆಯ ಇಂಡಸ್ಟ್ರಿಯಲ್ಲಿ ನಾನು ಅವರಂಥ ದೊಡ್ಡ ನಟನನ್ನು ಕಂಡಿಲ್ಲ, ಒಬ್ಬ ನಿರ್ದೇಶಕನಾಗಿ ಬೇರೆ ಯಾವ ನಟರಲ್ಲೂ ಅವರಲ್ಲಿದ್ದಂತ ಸೂಕ್ಷ್ಮತೆಯನ್ನು ಕಂಡಿಲ್ಲ, ಅವರ ಪ್ರತಿಭೆಯನ್ನು ನಾವೆಲ್ಲರೂ ಮೆಚ್ಚಲೇಬೇಕು, ಕೆಲವೊಂದು ವೇಳೆ ಅವರು ದೃಶ್ಯಗಳಲ್ಲಿ ಏಕೆ ವಿರಾಮ ತೆಗೆದುಕೊಳ್ಳುತ್ತಿದ್ದರು ಎಂದು ನನಗೆ ಅರ್ಥವಾಗುತ್ತಿರಲಿಲ್ಲ, ಮಾನಿಟರ್ ನಲ್ಲಿ ದೃಶ್ಯವನ್ನು ತಿರುಗಿಸಿದಾಗ ನನಗೆ ಅರ್ಥವಾಗುತ್ತಿತ್ತು, ಅವರ ಸಾಮರ್ಥ್ಯವನ್ನು ನನಗೆ ತುಂಬಾ ಸಮಯ ಬೇಕಾಗುತ್ತಿತ್ತು. ಅವರ ಮೌನ ತುಂಬಾ ದುಬಾರಿಯಾದ ಅಸ್ತಿಯಾಗಿತ್ತು ಎಂದು ಸ್ಮರಿಸಿದ್ದಾರೆ.