ಅಂಬಿ ನಿಂಗೆ ವಯಸ್ಸಾಯ್ತೊ ಸೆಟ್ ನಲ್ಲಿ ಅಂಬರೀಷ್ ಮತ್ತು ನಿರ್ದೇಶಕ ಗುರುನಾಥ್ ಗಾಣಿಗ 
ಸಿನಿಮಾ ಸುದ್ದಿ

ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದ ಮುಖ್ಯ ಪಾತ್ರದಲ್ಲಿ ಖುಷ್ಬೂ ಅಥವಾ ರಮ್ಯಕೃಷ್ಣ

ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದ ಮೂಲಕ ಅಂಬರೀಷ್ ಮತ್ತೆ ಮುಖ್ಯ ನಟನೆಗೆ ಮರಳಿದ್ದಾರೆ. ಚಿತ್ರದ ...

ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದ ಮೂಲಕ ಅಂಬರೀಷ್ ಮತ್ತೆ ಮುಖ್ಯ ನಟನೆಗೆ ಮರಳಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಗುರುನಾಥ ಗಾಣಿಗ ಎಂಬ ಚೊಚ್ಚಲ ನಿರ್ದೇಶಕ ಇದರ ನಿರ್ದೇಶನ ಮಾಡುತ್ತಿದ್ದು ಪ್ರೇಕ್ಷಕರಲ್ಲಿ ಕೂಡ ಕುತೂಹಲ ಮೂಡಿಸಿದೆ.

ಇದರಲ್ಲಿ ಅಂಬರೀಷ್ ವಿಶೇಷ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ದಿನಾಂಕಗಳ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಸುಹಾಸಿನಿ ಚಿತ್ರದಿಂದ ಹೊರಬರುವ ಸಾಧ್ಯತೆಯಿದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು.

ಪ್ರಸ್ತುತ ಪೋರ್ಚುಗಲ್ ನಲ್ಲಿರುವ ಸುಹಾಸಿನಿಗೆ ಮುಂದಿನ ಚಿತ್ರೀಕರಣ ದಿನಾಂಕಗಳಲ್ಲಿ ಬಂದು ಸೇರಿಕೊಳ್ಳುವುದು ಕಷ್ಟವಾಗಬಹುದಂತೆ. ಹೀಗಾಗಿ ಚಿತ್ರ ನಿರ್ಮಾಪಕರು ಖುಷ್ಬೂ ಮತ್ತು ರಮ್ಯಕೃಷ್ಣ ಅವರನ್ನು ಸಂಪರ್ಕಿಸಿವೆ ಎಂದು ಹೇಳಲಾಗುತ್ತಿದೆ.

ಅವರ ಲಭ್ಯತೆ ಮತ್ತು ಬೇರೆ ಬದ್ಧತೆಗಳನ್ನು ನೋಡಿಕೊಂಡು ಇಬ್ಬರಲ್ಲಿ ಒಬ್ಬರು ಪಾತ್ರಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಮುಖ್ಯ ಪಾತ್ರ ವಹಿಸುತ್ತಿರುವವರು ಯಾರು ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


ಕಿಚ್ಚ ಕ್ರಿಯೇಷನ್ಸ್ ನಡಿ ಚಿತ್ರ ತಯಾರಾಗುತ್ತಿದ್ದು ಇದಕ್ಕೆ ಜಾಕ್ ಮಂಜು ಕೂಡ ಬಂಡವಾಳ ಹೂಡಿದ್ದಾರೆ. ಸುದೀಪ್ ಮತ್ತು ಶೃತಿ ಹರಿಹರನ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಂಬಿ ನಿಂಗೆ ವಯಸ್ಸಾಯ್ತು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT