ಸಿನಿಮಾ ಸುದ್ದಿ

ತಮಿಳು ಚಿತ್ರರಂಗಕ್ಕೆ 'ಟಗರು' ನಾಯಕಿ ಮಾನ್ವಿತಾ ಹರೀಶ್ ಎಂಟ್ರಿ

Shilpa D
ಬೆಂಗಳೂರು: ಟಗರು ಕ್ರೇಜ್ ದಿನದಿಂದ ದಿನಕ್ಕೆ ಏರುತ್ತಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಮಾನ್ವಿತಾ ಹರೀಶ್ ಅವರಿಗೆ ಈ ಸಿನಿಮಾದಿಂದ ಹೆಚ್ಚಿನ ಲಾಭವಾಗಿದೆ.
ಇತ್ತೀಚೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ ಮಾನ್ವಿತಾ ಹರೀಶ್ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು, ಜೊತೆಗೆ ತಮ್ಮ ಮುಂದಿನ ಸಿನಿಮಾದಲ್ಲಿ ಆಕೆಗೆ ಅವಕಾಶ ನೀಡುವುದಾಗಿ ಹೇಳಿರುವ ಅವರು ಮುಂಗಡವಾಗಿ 2 ಸಾವಿರ ರು ಹಣ ನೀಡಿದ್ದಾರೆ.
ಇನ್ನೂ ನಿರ್ದೇಶಕ ಸೂರಿ ಅವರಿಗೆ ಮಾನ್ವಿತಾ ಹರೀಶ್ ಕೃತಜ್ಞತೆ ಸಲ್ಲಿಸಿದ್ದಾರೆ, ನನ್ನ ಪಾತ್ರದ ಮೇಲೆ ಅವರು ತುಂಬಾ ಭರವಸೆ ಇಟ್ಟಿದ್ದರು ಎಂದು ಹೇಳಿರುವ ಮಾನ್ವಿತಾ ತಮಿಳು ಚಿತ್ರರಂಗದಿಂದ ಆಫರ್ ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ.
ತಾನೊಬ್ಬಳು ತಮಿಳು ಸಿನಿಮಾ ಅಭಿಮಾನಿಯಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ತಮಿಳು ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದಾರೆ, ಗೌತಮ್ ಮೆನನ್ ಮತ್ತು ಮಣಿ ರತ್ನಂ ಸಿನಿಮಾಗಳನ್ನು ಇಷ್ಟ ಪಡುವುದಾಗಿ ತಿಳಿಸಿದ್ದಾರೆ.
SCROLL FOR NEXT