ಬಾಲಿವುಡ್ ನೃತ್ಯ ನಿರ್ದೇಶಕ ಸೀಸರ್ ಗೊನ್ಸಲ್ವೆಸ್ ಜೊತೆಗೆ ರಮೇಶ್ ಅರವಿಂದ್ 
ಸಿನಿಮಾ ಸುದ್ದಿ

ಈ ಹಾಡು ಮದುವೆ ಕಾರ್ಯಕ್ರಮದ ರಾಷ್ಟ್ರಗೀತೆ: ರಮೇಶ್ ಅರವಿಂದ್

ನಾಳೆ ನಮ್ಮ ಮನೆಯಲ್ಲಿ ಬಹಳ ದೊಡ್ಡ ಕಾರ್ಯಕ್ರಮ....ನಮ್ಮ ಹುಡ್ಗಿ ಮ್ಯಾರೇಜ್ ಇದೆ ಎಂಬ ಹಾಡಿನ ಸ್ವರಕ್ಕೆ ...

ನಾಳೆ ನಮ್ಮ ಮನೆಯಲ್ಲಿ ಬಹಳ ದೊಡ್ಡ ಕಾರ್ಯಕ್ರಮ....ನಮ್ಮ ಹುಡ್ಗಿ ಮ್ಯಾರೇಜ್ ಇದೆ ಎಂಬ ಹಾಡಿನ ಸ್ವರಕ್ಕೆ ಮದುಮಗಳು ಪಾರುಲ್ ಯಾದವ್ ಬಹಳ ಹುಮ್ಮಸ್ಸಿನಿಂದ ಡ್ಯಾನ್ಸ್ ಮಾಡುತ್ತಿದ್ದರು. ಹಿಂದಿಯ ಕ್ವೀನ್ ಚಿತ್ರದ ರಿಮೇಕ್ ಆದ ಬಟರ್ ಫ್ಲೈನಲ್ಲಿ ಪಾರುಲ್ ಯಾದವ್ ಈ ರೀತಿ ಕುಣಿಯುತ್ತಾರೆ.

ರಮೇಶ್ ಅರವಿಂದ್ ನಿರ್ದೇಶನದ ಬಟರ್ ಪ್ಲೈಯಲ್ಲಿ ಈ ಹಾಡಿಗೆ ಬಾಲಿವುಡ್  ನೃತ್ಯ ನಿರ್ದೇಶಕ ಸೀಸರ್ ಗೊನ್ಸಾಲ್ವ್ಸ್ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಈ ಹಾಡಿನ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಚಿತ್ರತಂಡದಿಂದ ಸಿಟಿ ಎಕ್ಸ್ ಪ್ರೆಸ್ ಗೆ ಕೆಲವು ಫೋಟೋಗಳು ಲಭ್ಯವಾಗಿದ್ದು ಪಾರುಲ್ ಯಾದವ್ ಜೊತೆಗೆ ಧರ್ಮೇಂದ್ರ, ಭಾರ್ಗವಿ ನಾರಾಯಣ್, ಪದ್ಮಜಾ ರಾವ್ ಮತ್ತು ಕೆಲವು ಹೊಸ ಮುಖಗಳು ಹೆಜ್ಜೆ ಹಾಕುತ್ತಿದ್ದಾರೆ.
ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಬಟರ್ ಫ್ಲೈ ಚಿತ್ರದ ಹಾಡು ತುಂಬಾ ಸುಂದರವಾಗಿ ಮೂಡಿಬಂದಿದೆ ಎನ್ನುವ ನಿರ್ದೇಶಕ ರಮೇಶ್ ಅರವಿಂದ್ ಹಿಂದಿಯ ಲಂಡನ್ ತುಂಪಕಡದಂತೆ ಇದೆ ಎನ್ನುತ್ತಾರೆ.

ಇನ್ನೆರಡು ದಿನಗಳಲ್ಲಿ ಈ ಹಾಡಿನ ತಮಿಳು ಅವತರಣಿಕೆಯ ಶೂಟಿಂಗ್ ಆರಂಭಿಸಲಿರುವ ರಮೇಶ್ ಅರವಿಂದ್ ಹಾಡಿಗೆ ನಾನು ವಿವರಣೆ ನೀಡಿದೆ. ಮದುವೆಯ ರಾಷ್ಟ್ರಗೀತೆಯಾಗಿ ಇದು ಬರಬೇಕು. ಯೋಗರಾಜ್ ಭಟ್ ಇದಕ್ಕೆ ಅದ್ಭುತ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ಶೂಟಿಂಗ್ ಮಾಡುವಾಗ ಸೆಟ್ ತುಂಬಾ ತಮಾಷೆಯಾಗಿತ್ತು ಎನ್ನುತ್ತಾರೆ.

ತಮಿಳುನಾಡಿನಲ್ಲಿ ಸದ್ಯ ನಡೆಯುತ್ತಿರುವ ಮುಷ್ಕರ ನಿಂತು ಪರಿಸ್ಥಿತಿ ತಿಳಿಯಾದರೆ ಇನ್ನು ಕೆಲವೇ ದಿನಗಳಲ್ಲಿ ಕಾಜಲ್ ಅಗರ್ ವಾಲ್ ಅವರು ಸಹ ಈ ಹಾಡಿನ ತಮಿಳು ಅವತರಣಿಕೆಯ ಶೂಟಿಂಗ್ ಆರಂಭವಾಗಲಿದೆ. ಕ್ವೀನ್ ಚಿತ್ರದ ಕನ್ನಡ ಚಿತ್ರ ಬಟರ್ ಫ್ಲೈಯ ಶೂಟಿಂಗ್ ಸುಮಾರು ಮುಗಿದಿದ್ದು ಸಣ್ಣ ಭಾಗವೊಂದರ ಚಿತ್ರೀಕರಣ ಪ್ಯಾರಿಸ್ ನಲ್ಲಿ ನಡೆಯಬೇಕಿದೆ ಎಂದು ಮಾಹಿತಿ ನೀಡಿದರು.

ತಮಿಳು ಅವತರಣಿಕೆ ಮುಗಿದ ನಂತರ ತಮನ್ನಾ ಭಾಟಿಯಾ ಜೊತೆ ತೆಲುಗಿನಲ್ಲಿ ಶೂಟಿಂಗ್ ಆರಂಭಿಸಲಿದ್ದಾರೆ. ದಕ್ಷಿಣ ಭಾರತೀಯ ಭಾಷೆಗಳಲ್ಲಿ ತಯಾರಾಗುತ್ತಿರುವ ಕ್ವೀನ್ ಚಿತ್ರದ ರಿಮೇಕ್ ಗೆ ಅಮಿತ್ ತ್ರಿವೇದಿ ಸಂಗೀತ ಮತ್ತು ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT