ನಟ ಪ್ರೇಮ್ 
ಸಿನಿಮಾ ಸುದ್ದಿ

ದಳಪತಿ ಬಿಡುಗಡೆಗೆ ಕಾಯುವುದೇ ಒಂದು ಸಂಭ್ರಮ: ಪ್ರೇಮ್

ಮೂರು ವರ್ಷಗಳಿಂದ ತಯಾರಿಯಲ್ಲಿದ್ದ ಪ್ರೇಮ್ ನಟನೆಯ ದಳಪತಿ ಚಿತ್ರ ಕೊನೆಗೂ ಬಿಡುಗಡೆಗೆ ಸಿದ್ದವಾಗಿದೆ...

ಮೂರು ವರ್ಷಗಳಿಂದ ತಯಾರಿಯಲ್ಲಿದ್ದ ಪ್ರೇಮ್ ನಟನೆಯ ದಳಪತಿ ಚಿತ್ರ ಕೊನೆಗೂ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಬಗ್ಗೆ ಪ್ರೇಮ್ ಕಾತರರಾಗಿದ್ದಾರೆ. ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಪ್ರೇಮ್, ದಳಪತಿಯ ಬಿಡುಗಡೆಗಾಗಿ ಕಾಯುತ್ತಿದ್ದೆ. ನಿರ್ದೇಶಕರು, ನಾನು ಮತ್ತು ನಾಯಕಿ ಬೇರೆ ಕೆಲಸಗಳಲ್ಲಿ ಬದ್ಧವಾಗಿದ್ದರಿಂದ ದಳಪತಿ ಬಿಡುಗಡೆಗೆ ವಿಳಂಬವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರ ಒಬ್ಬರಿಂದಲೇ ಬಿಡುಗಡೆಯಾಗಿ ಯಶಸ್ಸು ಕಾಣುವುದಲ್ಲ, ಅದು ಒಟ್ಟು ತಂಡದ ಕೆಲಸ ಎನ್ನುತ್ತಾರೆ.

ಕಳೆದ ವರ್ಷ ಪ್ರೇಮ್ ನಟನೆಯ ಚೌಕವೊಂದೆ ಬಿಡುಗಡೆಯಾದ ಚಿತ್ರ. ಇನ್ನು ಮುಂದೆ ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದು ಸೆಲ್ಫಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ಸುಮಾರು 76 ಕಥೆಗಳನ್ನು ಕೇಳಿದ್ದೇನೆ, ಆದರೆ ಒಂದು ಕೂಡ ನನಗೆ ಇಷ್ಟವಾಗಲಿಲ್ಲ. ಇಂದಿನ ಸಿನಿಮಾ ಉದ್ಯಮದಲ್ಲಿ ನನ್ನಂಥ ನಟನಿಗೆ ಯಾವ ಕಥೆಯನ್ನಾದರೂ ಮತ್ತು ಎಲ್ಲಾ ಕಥೆಗಳನ್ನು ಒಪ್ಪಿಕೊಂಡು ಸಿನಿಮಾ ಮಾಡುವುದು ಕಷ್ಟ. ಆರಂಭದಲ್ಲಿ ನಾವು ಚಿತ್ರೋದ್ಯಮದಲ್ಲಿ ಉಳಿಯಲು ಸಿನಿಮಾ ಮಾಡಿದೆವು. ಇಂದು ಪ್ರೇಕ್ಷಕ ಮತ್ತು ಚಿತ್ರೋದ್ಯಮದ ಪರಿಸ್ಥಿತಿ ಬದಲಾಗಿದೆ ಎನ್ನುತ್ತಾರೆ.

ಇತ್ತೀಚೆಗೆ ಸಿನಿಮಾಗಳಲ್ಲಿ ಅಪರೂಪವಾಗಿ ಕಾಣಿಸಿಕೊಂಡಿದ್ದರಿಂದ ಅವರಿಗೆ ಏನೋ ಕಳೆದುಕೊಂಡಂತೆ ಭಾಸವಾಯಿತಂತೆ. ಕೆಲವು ಸಂದರ್ಭಗಳಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಜನರು ಕಥೆಯನ್ನು ನಮ್ಮ ನಟನೆಯನ್ನು ಇಷ್ಟಪಡಬೇಕಾದರೆ ತಾಳ್ಮೆಯಿಂದ ಸರಿಯಾದ ಸಿನಿಮಾ ಮಾಡಲು ಕಾಯಬೇಕಾಗುತ್ತದೆ ಎಂದು ಪ್ರೇಮ್ ಅಭಿಪ್ರಾಯ.

ದಳಪತಿ ಚಿತ್ರ ಮಾಡಲು ಕಳೆದ ಒಂದೊಂದು ಸಮಯವೂ ಅಮೂಲ್ಯವಾಗಿತ್ತಂತೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇಲ್ಲಿ ಪ್ರೀತಿಯ ಅಂಶಗಳಿವೆ. ಪ್ರೇಮ್ ಪ್ರೀತಿಯ ಸಿನಿಮಾಗಳಿಗೆ ಮಾತ್ರ ಅರ್ಹ ಎಂದು ಹೇಳುವವರಿಗೆ ಈ ಸಿನಿಮಾದಲ್ಲಿ ಉತ್ತರ ಕೊಟ್ಟಿದ್ದೇನೆ ಎಂದು ಭಾವಿಸುತ್ತೇನೆ. ಲವ್ಲಿ ಪ್ರೇಮ್ ಎಂದು ಟ್ಯಾಗ್ ಕೊಟ್ಟಿರುವ ನಾನು ಆಕ್ಷನ್ ಚಿತ್ರಗಳನ್ನು ಕೂಡ ಮಾಡಬಲ್ಲೆ ಎಂದು ಹೇಳುತ್ತೇನೆ, ಇದೊಂದು ಅದ್ವಿತೀಯ ಚಿತ್ರ ಎಂದು ಹೇಳುವುದಿಲ್ಲ, ಆದರೆ ಚಿರಪರಿಚಿತ ವಿಷಯವನ್ನು ವಿಶಿಷ್ಟವಾಗಿ ತೋರಿಸಲಾಗಿದೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT