ಪ್ರಿಯಾಂಕ ತಿಮ್ಮೇಶ್ 
ಸಿನಿಮಾ ಸುದ್ದಿ

ಚಿಲ್ಲಂನಲ್ಲಿ ನಟಿಸುತ್ತಿರುವುದು ಖುಷಿ ನೀಡಿದೆ: ಪ್ರಿಯಾಂಕ ತಿಮ್ಮೇಶ್

ಸರಿಯಾದ ಹಾದಿಯಲ್ಲಿ ಹೆಜ್ಜೆಯಿಡುತ್ತಿರುವ ಪ್ರಿಯಾಂಕ ತಿಮ್ಮೇಶ್ ತಮ್ಮ ಪ್ರಾಜೆಕ್ಟ್ ಗಳನ್ನು ಜಾಗರೂಕತೆಯಿಂದ...

ಸರಿಯಾದ ಹಾದಿಯಲ್ಲಿ ಹೆಜ್ಜೆಯಿಡುತ್ತಿರುವ ಪ್ರಿಯಾಂಕ ತಿಮ್ಮೇಶ್ ತಮ್ಮ ಪ್ರಾಜೆಕ್ಟ್ ಗಳನ್ನು ಜಾಗರೂಕತೆಯಿಂದ ಆರಿಸುತ್ತಾರೆ. ಮಲಯಾಳಂನಲ್ಲಿ ಒಂದು ಮತ್ತು ಕನ್ನಡದಲ್ಲಿ ಎರಡು ಚಿತ್ರಗಳ ಶೂಟಿಂಗ್ ಮುಗಿಸಿರುವ ಪ್ರಿಯಾಂಕ ತಿಮ್ಮೇಶ್ ಸರಿಯಾದ ಚಿತ್ರಕಥೆಗೆ ಕಾಯುತ್ತಾರಂತೆ.

ಭೀಮಸೇನ ನಳ ಮಹರಾಜ ಚಿತ್ರದ ನಂತರ ಮನೋರಂಜನ್ ನಟನೆಯ ಚಿಲ್ಲಮ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಡಿಶನ್ ನಂತರ ಚಿತ್ರ ನಿರ್ಮಾಪಕರಿಗೆ ಪ್ರಿಯಾಂಕ ತಿಮ್ಮೇಶ್ ಈ ಪಾತ್ರಕ್ಕೆ ಸೂಕ್ತ ಎನಿಸಿದೆ.

ಗಣಪ ಚಿತ್ರದ ಹಿರೋಯಿನ್ ಪ್ರಿಯಾಂಕಾ ಹೇಳುವುದು ಹೀಗೆ: ಕನ್ನಡದಲ್ಲಿ ಅಪರೂಪ ಚಿತ್ರವಾಗಿರುವ ಚಿಲ್ಲಮ್ ನಲ್ಲಿ ಮಹಿಳಾ ನಿರ್ದೇಶಕಿಯಾದ ಜೆ.ಚಂದ್ರಕಲಾ ಅವರ ಜೊತೆ ಕೆಲಸ ಮಾಡುವುದು ಉತ್ಸಾಹವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ.

ಮನೋರಂಜನ್ ಮತ್ತು ಪ್ರಿಯಾಂಕಾ ನಾಯಕ-ನಾಯಕಿಯಾಗಿ ಅಭಿನಯಿಸುವ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಮತ್ತು ಸರಿತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಂದ್ರಕಲಾ ಅವರು ಕಥೆಯನ್ನು ವಿವರಿಸಿದ ರೀತಿ ಇಷ್ಟವಾಯಿತು. ನನ್ನ ಪಾತ್ರವನ್ನು ವಿವರಿಸುವಾದ ಪ್ರತಿ ದೃಶ್ಯವನ್ನು ಗ್ರಹಿಸಿಕೊಂಡೆ. ಎಲ್ಲಾ ಕಲಾವಿದರಿಂದ ಅದ್ಭುತ ನಟನೆಯನ್ನು ಚಿತ್ರತಂಡ ಬಯಸಿದೆ. ಆಡಿಶನ್ ಮುಗಿಸಿ ಹೊರಗೆ ಬರುವಾಗ ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಗಬೇಕು ಎಂದು ಭಾವಿಸುತ್ತಿದ್ದೆ ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT