ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.
ನಗರದ ಗುರುಡ ಮಾಲ್ ನಲ್ಲಿ ಚಿತ್ರದ ಫೈಟಿಂಗ್ ಸೀನ್ ಗಳನ್ನು ಚಿತ್ರೀಕರಿಸಲಾಗುತ್ತಿದ್ದು ಭಾರೀ ಮೀಸೆ ಬಿಟ್ಟು ಯಂಗ್ ಆ್ಯಂಡ್ ಎನರ್ಜೆಟಿಕ್ ಆಗಿ ಕಾಣಿಸಿಕೊಂಡಿರುವ ಅಂಬರೀಶ್ ಅವರು ಯುವಕನಂತೆ ಫೈಟ್ ಮಾಡಿದ್ದಾರೆ.
ಇನ್ನು ಆರು ದಿನದ ಚಿತ್ರೀಕರಣ ಭಾಗಿಯಿದ್ದು ಕೇರಳದಲ್ಲಿ ಚಿತ್ರೀಕರಣ ನಡೆಯಲಿದೆ. ಅಲ್ಲಿಂದ ಬಂದ ನಂತರ ನಟಿ ಸುಹಾಸಿನಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಡೇಟ್ಸ್ ಕ್ಲಾಷ್ ಆಗಿದ್ದರಿಂದ ಸುಹಾಸಿನಿ ಅವರ ಬದಲಿಗೆ ರಮ್ಯಾ ಕೃಷ್ಣ ಅಥವಾ ಖುಷ್ಬೂ ಅವರನ್ನು ಅಭಿನಯಿಸುವ ಸಾಧ್ಯತೆ ಇತ್ತು. ಆದರೆ ಕೊನೆಗೂ ಸುಹಾಸಿನಿ ಅವರೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಸುದೀಪ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ಜಾಕ್ ಮಂಜು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುದೀಪ್ ಮತ್ತು ಶೃತಿ ಹಾಸನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.