ಸಿನಿಮಾ ಸುದ್ದಿ

ಚಿತ್ರೀಕರಣದ ವೇಳೆ ಅಮ್ಮ ಎನ್ನುತ್ತಾರೆ, ರಾತ್ರಿ ಸೆಕ್ಸ್ ಗೆ ಕರೆಯುತ್ತಾರೆ: ತೆಲುಗು ನಟಿ ಸಂಧ್ಯಾ ನಾಯ್ಡು

Lingaraj Badiger
ಹೈದರಾಬಾದ್: ಟಾಲಿವುಡ್ ಅಂಗಳದಲ್ಲಿನ ಕಾಸ್ಟಿಂಗ್ ಕೋಚ್ ವಿರುದ್ಧ ಕಿರಿಯ ಕಲಾವಿದರ ಕೂಗು ಮತ್ತಷ್ಟು ಗಟ್ಟಿಯಾಗಿದೆ ಮತ್ತು ಸ್ಪಷ್ಟವಾಗಿದೆ. 
ಇತ್ತೀಚಿಗಷ್ಟೆ ನಟಿ ಶ್ರೀ ರೆಡ್ಡಿ ಅವರು ಕಾಸ್ಟಿಂಗ್ ಕೋಚ್ ವಿರುದ್ಧ ನಡುರಸ್ತೆಯಲ್ಲೇ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದರು. ಇದೀಗ ಹಲವು ಕಿರಿಯ ಕಲಾವಿದರು ಸಹ ಶ್ರೀ ರೆಡ್ಡಿ ಆರೋಪಕ್ಕೆ ಧ್ವನಿಗೂಡಿಸಿದ್ದು, ಚಿತ್ರೀಕರಣದ ವೇಳೆ ಅಮ್ಮ ಎಂದು ಕರೆಯುವ  ನಿರ್ದೇಶಕರು ರಾತ್ರಿ ಸೆಕ್ಸ್ ಗೆ ಒತ್ತಾಯಿಸುತ್ತಾರೆ ಎಂದು ತೆಲುಗು ನಟಿ ಸಂಧ್ಯಾ ನಾಯ್ಡು ಅವರು ಆರೋಪಿಸಿದ್ದಾರೆ.
ಸುಮಾರು 15 ಕಲಾವಿದರು ಇಂದು ಟಾಲಿವುಡ್ ನಲ್ಲಿ ತಮಗಾದ ಕೆಟ್ಟ ಅನುಭವವನ್ನು ಮಾಧ್ಯಮಗಳ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಮನೆಗೆ ಬಂದ್ ನಂತರವೂ ವಾಟ್ಸ್ ಆಪ್ ಮೂಲಕ ಚಾಟ್ ಗೆ ಒತ್ತಾಯಿಸುತ್ತಾರೆ. ಅಲ್ಲದೆ ಯಾವ ಬಟ್ಟೆ ಹಾಕಿಕೊಂಡಿದ್ದೀಯಾ, ಅದು ಟ್ರಾನ್ಸಪರೆಂಟಾ ಎಂದೇಲ್ಲಾ ಕೇಳುತ್ತಾರೆ ಎಂದು ಕಳೆದ 10 ವರ್ಷಗಳಿಂದ ಚಿತ್ರೋದ್ಯಮದಲ್ಲಿರುವ ಸಂಧ್ಯಾ ಆರೋಪಿಸಿದ್ದಾರೆ.
ಚಿತ್ರದಲ್ಲಿ ಅವಕಾಶಕ್ಕಾಗಿ ನಾವು ನಿರ್ದೇಶಕರಿಗಾಗಿ ಎಲ್ಲವನ್ನೂ ಮಾಡಿದ್ದೇವೆ. ಕಾಸ್ಟಿಂಗ್ ಕೋಚ್ ಸೇರಿದಂತೆ ಉತ್ತಮವಾಗಿ ಕಾಣಲು ಹಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇವೆ. ನಮ್ಮ ಚರ್ಮದ ಟೋನ್ ಸಹ ಬದಲಾಯಿಸಿಕೊಂಡಿದ್ದೇವೆ. ಆದರೂ ನಾವು ಅವರ ಕೈಯಲ್ಲಿ ಕೇವಲ ಪ್ಯಾದೆಗಳು ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀರೆಡ್ಡಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಲಾವಿದರು, ಟಾಲಿವುಡ್ ಅಂಗಳದಲ್ಲಿನ ಕಾಸ್ಟಿಂಗ್ ಕೋಚ್ ನಿಲ್ಲುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೊರಾಂಗಣದ ಚಿತ್ರೀಕರಣದ ವೇಳೆ ಬಯಲಿನಲ್ಲೇ ನಾವು ಬಟ್ಟೆಗಳನ್ನು ಬದಲಾಯಿಸಬೇಕು. ಮ್ಯಾನೇಜರ್ ಗಳು ಕಾರ್ ವ್ಯಾನ್ ಅನ್ನು ಬಳಸುವಂತೆ ಹೇಳಿದರೂ ನಾವು ಅದನ್ನು ಬಳಸುವಂತಿಲ್ಲ ಮತ್ತು ನಮ್ಮನ್ನು ಅಶ್ಲೀಲ ಪದಗಳಿಂದ ನಿಂದಿಸಿ, ನಮ್ಮನ್ನು ಹುಳುಗಳಂತೆ ಕೀಳಾಗಿ ನೋಡುತ್ತಾರೆ ಎಂದು ಮತ್ತೊಬ್ಬ ನಟಿ ಸುನಿತಾ ರೆಡ್ಡಿ ಅವರು ಆರೋಪಿಸಿದ್ದಾರೆ.
ತೆಲುಗು ನಿರ್ದೇಶಕರು ಮತ್ತು ನಿರ್ಮಾಪಕರು ಸಿನಿಮಾಗಳಲ್ಲಿ ನಟಿಸುವ ನಟಿಯರಿಗೆ ಲೈಂಗಿಕ ಕಿರುಕುಳ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇಂತಹ ಕಾಸ್ಟಿಂಗ್ ಕೌಚ್ ತೆಲುಗು ಸಿನಿಮಾ ರಂಗದಲ್ಲಿ ನಿಲ್ಲಬೇಕೆಂದು ಆಗ್ರಹಿಸಿ ನಟಿ ಶ್ರೀರೆಡ್ಡಿ ಅವರು ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದರು.
ಕಿರಿಯ ಕಲಾವಿದರ ಬೇಡಿಕೆಗಳು
  • ಚಿತ್ರೋದ್ಯಮ ಮಹಿಳೆಯರಿಗೆ ಸುರಕ್ಷಿತ ಎಂಬುದನ್ನು ಖಾತರಿಪಡಿಸಬೇಕು
  • ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಮಿತಿ ರಚಿಸಬೇಕು 
  • ಕನಿಷ್ಠಿ ಶೇ.30ರಷ್ಟಾದರೂ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು
  • ನಮ್ಮ ಚರ್ಮದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು
  • ಮಧ್ಯವರ್ತಿಗಳನ್ನು ತೆಗೆದುಹಾಕಬೇಕು
  • ತಿಂಗಳಲ್ಲಿ ಕನಿಷ್ಠಿ ವೇತನದೊಂದಿಗೆ 10 ದಿನ ಕೆಲಸ ನೀಡಬೇಕು
SCROLL FOR NEXT