ಪುನೀತ್ ರಾಜಕುಮಾರ್, ಸಂತೋಷ್ ಆನಂದರಾಮ್ 
ಸಿನಿಮಾ ಸುದ್ದಿ

ಸಂತೋಷ್-ಪುನೀತ್ ಯಶಸ್ವಿ ಜೋಡಿಯ ಮುಂದಿನ ಚಿತ್ರಕ್ಕೆ ಡಾ.ರಾಜ್ ಚಿತ್ರದ ಟೈಟಲ್!

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ರಾಜಕುಮಾರ ಚಿತ್ರದ ನಂತರ ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜಕುಮಾರ್ ಮತ್ತೊಮ್ಮೆ...

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ರಾಜಕುಮಾರ ಚಿತ್ರದ ನಂತರ ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜಕುಮಾರ್ ಮತ್ತೊಮ್ಮೆ ಜತೆಯಾಗುತ್ತಿದ್ದು ಈ ಚಿತ್ರದ ಕುರಿತು ಗಾಂಧಿನಗರದಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ. 
ದಿವಂಗತ ವರನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಚಿತ್ರದ ಕುರಿತಂತೆ ಅಧಿಕೃತ ಘೋಷಣೆಯಾಗಲಿದೆ. ಆದರೆ ಇಲ್ಲಿಯವರೆಗೂ ಶೀರ್ಷಿಕೆ ಕುರಿತು ನಿರ್ಧಾರವಾಗಿಲ್ಲ. ಆದರೆ ಬಲ್ಲ ಮೂಲಗಳಿಂದ ಡಾ. ರಾಜಕುಮಾರ್ ಅವರು ಅಭಿನಯಿಸಿರುವ ಯಾವುದಾದರೂ ಚಿತ್ರದ ಟೈಟಲ್ ಅನ್ನೇ ತಮ್ಮ ಮುಂದಿನ ಚಿತ್ರಕ್ಕೆ ಇಡಲು ನಿರ್ದೇಶಕರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. 
ಅಂದರೆ ನಟಸಾರ್ವಭೌಮ ರಾಜಕುಮಾರ್ ಅಭಿನಯಿಸಿರುವ 205 ಚಿತ್ರಗಳ ಪೈಕಿ ಯಾವುದಾದರೂ ಒಂದು ಚಿತ್ರದ ಟೈಟಲ್ ಆಗಿರಲಿದೆ. ಇನ್ನು ನಿರ್ದೇಶಕರು ಕಥೆಗೆ ಸಂಬಂಧಿಸಿದಂತೆ ಮೂರು ಟೈಟಲ್ ಗಳನ್ನು ಆಯ್ಕೆ ಮಾಡಿದ್ದು ಅದರಲ್ಲಿ ಯಾವ ಟೈಟಲ್ ಅಂತಿಮವಾಗುತ್ತದೆ ಕಾದು ನೋಡಬೇಕು. ನಿರ್ದೇಶಕರು ಮಾತ್ರ ತಮ್ಮ ಚಿತ್ರದ ಟೈಟಲ್ ಕುರಿತಂತೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. 
ಚಿತ್ರಕ್ಕೆ ರಾಜರತ್ನ ಎಂದು ಶೀರ್ಷಿಕೆ ಇಡುವಂತೆ ಪುನೀತ್ ಅಭಿಮಾನಿಗಳು ನಿರ್ದೇಶಕರಿಗೆ ಮನವಿ ಮಾಡಿದ್ದರು. ಆದರೆ ಚಿತ್ರದ ಕಥೆ ಸಾಮಾಜಿಕ ಸಮಸ್ಯೆಗಳ ಕುರಿತಾದ್ದರಿಂದ ನಿರ್ದೇಶಕರು ಈ ಟೈಟಲ್ ಸೂಕ್ತ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಟೈಟಲ್ ಯಾವುದೇ ಅಂತಿಮವಾಗಲಿ ಆದರೆ ಅದು ಖಂಡಿತ ಪರಿಣಾಮ ಬೀರಲಿದೆ. 
ಹೊಂಬಾಳೆ ಫಿಲ್ಮಂ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ಚುನಾವಣೆ ಮುಗಿದ ನಂತರ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಪುನೀತ್ ಅಭಿಮಾನಿಗಳು ಮಾತ್ರ ಚಿತ್ರಕ್ಕೆ ಯಾವ ಟೈಟಲ್ ಇಡಬಹುದು ಎಂದು ಊಹಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!