ವಿನಯ್ ರಾಜ್ ಕುಮಾರ್, ಶ್ರೀಧರ್ ಮತ್ತು ಮನಸಾ ರಾಧಾಕೃಷ್ಣನ್
ಬೆಂಗಳೂರು: ದಕ್ಷಿಣದ ಖ್ಯಾತ ನಟಿ ಖುಷ್ಬೂ ಎಂಟು ವರ್ಷದ ಬಳಿಕ ಮತ್ತೆ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀಧರ್ ನಿರ್ದೇಶನದ ’ಅಪ್ಪ ಅಮ್ಮ ಪ್ರೀತಿ’ ಚಿತ್ರದ ಮೂಲಕ ಅವರು ಸ್ಯಾಂಡಲ್ ವುಡ್ ಗೆ ಕಂ ಬ್ಯಾಕ್ ಆಗಿದ್ದಾರೆ.
ವಿನಯ್ ರಾಜ್ ಕುಮಾರ್ ನಾಯಕ ನಟನಾಗಿರುವ ಈ ಚಿತ್ರದ ಮುಖೇನ ಮಲಯಾಳಂ ನಟಿ ಮಾನಸಾ ರಾಧಾಕೃಷ್ಣನ್ ಕನ್ನಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.
ಈ ಮುನ್ನ ನಿರ್ಧರಿಸಿದ್ದಂತೆ ನಿಜ ಜೀವನದ ದಂಪತಿಗಳಾದ ರಾಧಿಕಾ ಹಾಗೂ ಶರತ್ ಕುಮಾರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಬೇಖಾಗಿತ್ತು. ಆದರೆ ರಾಧಿಕಾ ಅವರ ಬಿಡುವಿಲ್ಲದ ಶೆಡ್ಯೂಲಿಂಗ್, ಚಿತ್ರೀಕರಣಕ್ಕೆ ದಿನಾಂಕ ನಿಗದಿಯಲ್ಲಿ ಉಂಟ್ಡ ಗೊಂದಲದ ಕಾರಣದಿಂದ ರಾಧಿಕಾ ಮಾಡಬೇಕಾದ ಪಾತ್ರ ಬಹುಭಾಷಾ ನಟಿ ಖುಷ್ಬೂ ಪಾಲಾಗಿದೆ.
ಖುಷ್ಬೂ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ’ರಣಧೀರ’ ಚಿತ್ರದ ಮೂಲಕ ಕನ್ನಡಿಗ ಪ್ರೇಕ್ಷಕರ ಮನಸೆಳೆದಿದ್ದರು. 2010ರಲ್ಲಿ ತೆರೆಗೆ ಬಂಡ ’ಜನನಿ’ ಅವರ ಅಭಿನಯದ ಕಡೆಯ ಕನ್ನಡ ಚಿತ್ರವಾಗೊತ್ತು.
ನಿರ್ದೇಶಕ ಶ್ರೀಧರ್ ಅವರಿಂದ ಪಾತ್ರದ ಕುರಿತು ತಿಳಿದ ಖುಷ್ಬೂ ಈ ಚಿತ್ರದಲ್ಲಿ ಅಭಿನಯಿಸಲು ಉತ್ಸುಕರಾಗಿದ್ದಾರೆ. ಈ ಸಂಬಂಧ ಅವರು ನಾಯಕ ನಟ ವಿನಯ್ ಅವರ ತಂದೆ ನಟ ರಾಘವೇಂದ್ರ ರಾಜ್ ಕುಮಾರ್ ಅವರೊಡನೆ ಮಾತುಕತೆ ನಡೆಸಿದ್ದಾರೆ.
ಜುದಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದರೆ ’ರಾಮ ರಾಮ ರೇ’ ಚಿತ್ರದ ಛಾಯಾಗ್ರಾಹಕ ಲವೀತ್ ಈ ಚಿತ್ರಕ್ಕೆ ಕೆಲಸಮಾಡಿದ್ದಾರೆ. ಶ್ರೀಕಾಂತ್ ಚಿತ್ರದ ಸಂಕಲನಕಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿನಯ್ ರಾಜ್ ಕುಮಾರ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿರುವ ಈ ಚುತ್ರಕ್ಕೆ ’ಇದೇ ನನ್ನ ಪ್ರಪಂಚ’ ಎನ್ನುವ ಟ್ಯಾಗ್ ಲೈನ್ ಇದೆ.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಟಿ ಮಾನಸ ತಮ್ಮ ಪಾತ್ರದ ಸಂಬಾಷಣೆಗಳನ್ನು ಅಭ್ಯಾಸ ನಡೆಸುವಲ್ಲಿ ನಿರತರಾಗಿದ್ದಾರೆ. ನಟ ವಿನಯ್ ತಾವು ಸಹ ಈ ಚಿತ್ರದಲ್ಲಿ ಅಭಿನಯಿಸಲು ವಿಶೇಷ ತಯಾರಿ ನಡೆಸಿದ್ದಾರೆ.ಮೇ ಮಧ್ಯಭಾಗ ಅಥವಾ ಜೂನ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದೆ.