ನವದೆಹಲಿ: ನಟ ಸಾರ್ವಭೌಮ ದಿವಂಗತ ಡಾ. ರಾಜಕುಮಾರ್ ಅವರ 90ನೇ ಜನ್ಮದಿನ ಹಿನ್ನೆಲೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜಣ್ಣ ಅವರನ್ನು ಸ್ಮರಿಸಿದ್ದಾರೆ.
ಅಮಿತ್ ಶಾ ತಮ್ಮ ಟ್ವೀಟ್ ನಲ್ಲಿ ನಟ ಸಾರ್ವಭೌಮ, ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಜನ್ಮದಿನ ಆಚರಣೆಯಲ್ಲಿ ವಿಶಿಷ್ಟ ಸಂಭ್ರಮವಿದೆ. ಕನ್ನಡಾಂಬೆಯ ಹೆಮ್ಮೆಯ ಪುತ್ರ ಕನ್ನಡ ಕಂಠೀರವನ ಕೊಡುಗೆ ಅವಿಸ್ಮರಣೀಯ. ಅಭಿಮಾನಿಗಳನ್ನು ದೇವರೆಂದ ಹೃದಯವಂತನ ಕಲಾನಿಷ್ಠೆ, ಸಾಮಾಜಿಕ ಬದ್ಧತೆ, ವ್ಯಕ್ತಿತ್ವ ನಮಗೆ ಆದರ್ಶ ಎಂದು ಟ್ವೀಟ್ ಮಾಡಿದ್ದಾರೆ.
ನಗರದ ಕಂಠೀರವ ಸ್ಟುಡಿಯೋ ಬಳಿಯ ಡಾ. ರಾಜಕುಮಾರ್ ಸಮಾಧಿಗೆ ಇಂದು ರಾಜ್ ಕುಟುಂಬಸ್ಥರು ಮತ್ತು ಅಭಿಮಾನಿಗಳು ತೆರಳಿ ನಮನ ಸಲ್ಲಿಸಿದ್ದಾರೆ.