ಬೆಂಗಳೂರು: ಮುಂಗಾರು ಮಳೆ-2 ಕನ್ನಡ ಸಿನಿಮಾದಲ್ಲಿ ನಟಿಸಿದ್ದ ನೇಹಾ ಶೆಟ್ಟಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಸದ್ಯ ತೆಲುಗಿನ ಮೆಹಬೂಬಾ ಸಿನಿಮಾದಲ್ಲಿ ನೇಹಾ ಶೆಟ್ಟಿ ಮತ್ತು, ಆಕಾಶ್ ಪುರಿ ನಟಿಸಿದ್ದಾರೆ. ಇದರ ಜೊತೆಗೆ ವೇರ್ ಹೆಲ್ಮೆಟ್ ವೈಲ್ ಡ್ರೈವಿಂಗ್ ಎಂಬ ಜಾಗೃತಿ ಮೂಡಿಸುವ ಕಿರುಚಿತ್ರದಲ್ಲೂ ಅಭಿನಯಿಸಿದ್ದಾರೆ.
ಯುವ ನಿರ್ದೇಶಕ ಜೆನ್ನಿಫರ್ ಆಲ್ಪೋನ್ಸೋ ನಟಿಸಿದ್ದಾರೆ. 1 ನಿಮಿಷದ ಈ ಶಾರ್ಟ್ ಸಿನಿಮಾದಲ್ಲಿ ಪ್ರಾಣದ ಮಹತ್ವದ ಬಗ್ಗೆ ಹೇಳಲಾಗಿದೆ.
ಈ ಶಾರ್ಟ್ ಸಿನಿಮಾವನ್ನು ಮಾರ್ಚ್ ತಿಂಗಳಲ್ಲಿ ಶೂಟಿಂಗ್ ಮಾಡಲಾಗಿತ್ತು, ಇದೇ ವೇಳೆ ಮೆಹಬೂಬಾ ಸಿನಿಮಾ ಕೂಡ ಶೂಟಿಂಗ್ ಮಾಡಲಾಗಿತ್ತು, ಹೆಲ್ಮೆಟ್ ಹಾಕುವುದರ ಪ್ರಾಮುಖ್ಯತೆ ಬಗ್ಗೆ ಈ ಕಿರುಚಿತ್ರದಲ್ಲಿ ತಿಳಿಸಲಾಗಿದೆ, ಜಾಗೃತಿ ಮೂಡಿಸುವ ಕೆಲಸದ ಒಂದು ಭಾಗವಾಗಿರುವುದಕ್ಕೆ ನನಗೆ ಖುಷಿಯಾಗಿದೆ ಎಂದು ನೇಹಾ ಶೆಟ್ಟಿ ತಿಳಿಸಿದ್ದಾರೆ.
ಶಶಾಂಕ್ ನಿರ್ದೇಶನದ ಮುಂಗಾರು ಮಳೆ-2 ಸಿನಿಮಾದಲ್ಲಿ ನೇಹಾ ಶೆಟ್ಟಿ ನಟಿಸಿದ್ದರು.