ನಿರ್ದೇಶಕ ಶ್ರೀಜೈ, ನಟ ರಮೇಶ್ ಅರವಿಂದ್, ಕಾರ್ಯಕಾರಿ ನಿರ್ಮಾಪಕ ರವಿರಾಜ್ ಮತ್ತು ಯಾದವ್ ಜೊತೆ ರಾಧಿಕಾ ಕುಮಾರಸ್ವಾಮಿ 
ಸಿನಿಮಾ ಸುದ್ದಿ

ಭೈರದೇವಿಯಲ್ಲಿ ರಮೇಶ್ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ

ಕಾಂಟ್ರಾಕ್ಟ್ ಮತ್ತು ರಾಜೇಂದ್ರ ಪೊನ್ನಪ್ಪ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ರಾಧಿಕಾ ಕುಮಾರಸ್ವಾಮಿ...

ಕಾಂಟ್ರಾಕ್ಟ್ ಮತ್ತು ರಾಜೇಂದ್ರ ಪೊನ್ನಪ್ಪ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ರಾಧಿಕಾ ಕುಮಾರಸ್ವಾಮಿ ಭೈರದೇವಿ ಚಿತ್ರದ ನಿರ್ಮಾಣದಲ್ಲಿ ಕೂಡ ತೊಡಗಿದ್ದಾರೆ. ಶ್ರಿಜೈ ನಿರ್ದೇಶನದ ಚಿತ್ರವಾಗಿರುವ ಭೈರದೇವಿಯನ್ನು ಶಮಿಕಾ ಎಂಟರ್ ಪ್ರೈಸಸ್ ನಡಿ ನಿರ್ಮಿಸಲಾಗುತ್ತಿದ್ದು ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಗಳಲ್ಲಿ ತಯಾರಾಗುತ್ತಿದೆ.

ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು ರಮೇಶ್ ಅರವಿಂದ್ ಅವರ ಭಾಗದ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಕೆಲವು ಫೋಟೋಗಳನ್ನು ರಾಧಿಕಾ ಸಿಟಿ ಎಕ್ಸ್ ಪ್ರೆಸ್ ಜೊತೆ ಹಂಚಿಕೊಂಡಿದ್ದಾರೆ. ಮೇ 7ರ ವೇಳೆಗೆ ರಮೇಶ್ ಅರವಿಂದ್ ಅವರ ಭಾಗದ ಚಿತ್ರೀಕರಣವನ್ನು ಮುಗಿಸಬೇಕಿದೆ. ಯಾಕೆಂದರೆ ನಂತರ ಅವರು ಹಲವು ಕೆಲಸಗಳಲ್ಲಿ ಬ್ಯುಸಿಯಾಗುತ್ತಾರೆ. ಅವರ ಭಾಗದ ಚಿತ್ರದ ಹಲವು ದೃಶ್ಯಗಳನ್ನು ಈಗ ಚಿತ್ರೀಕರಿಸಲಾಗುತ್ತಿದ್ದು ಕೆಲವೊಂದು ಭಾಗದ ಚಿತ್ರೀಕರಣವನ್ನು ನಂತರ ಮಾಡಬಹುದು ಎಂದು ರಾಧಿಕಾ ಹೇಳುತ್ತಾರೆ.

ಕಾಫಿ ಶಾಪ್ ಗಳು, ಕಾಲೇಜುಗಳು, ಆಸ್ಪತ್ರೆಗಳು ಮತ್ತು ರಾಧಿಕಾ ಮನೆಯ ಭಾಗದ ಚಿತ್ರೀಕರಣಗಳು ನಡೆಯುತ್ತಿವೆ. ಬಾಲ ಕಲಾವಿದೆ ಗ್ರೀಷ್ಮಾರ ಭಾಗವನ್ನು ಕೂಡ ಚಿತ್ರೀಕರಿಸಲಾಗಿದೆ. ಈ ಮಧ್ಯೆ ರಾಧಿಕಾ ರವಿಚಂದ್ರನ್ ಜೊತೆಗೆ ರಾಜೇಂದ್ರ ಪೊನ್ನಪ್ಪದ ಚಿತ್ರೀಕರಣದಲ್ಲಿ ಕೂಡ ತೊಡಗಿದ್ದಾರೆ. ಚಿತ್ರಕ್ಕೆ ಪೂರಕವೆಂಬಂತೆ ಫೋಟೋ ಶೂಟ್ ವೊಂದರಲ್ಲಿ ಕೂಡ ಭಾಗಿಯಾಗಿದ್ದಾರೆ.

ಭೈರದೇವಿ ಚಿತ್ರದಲ್ಲಿ ಆಪ್ತಮಿತ್ರದ ಛಾಯೆ ಕಾಣಬಹುದು. ಚಿತ್ರದಲ್ಲಿ ಸ್ಕಂದ ಅಶೋಕ್ ಮತ್ತು ಅನು ಪ್ರಭಾಕರ್ ಕೂಡ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ