ಸಂಜನಾ 
ಸಿನಿಮಾ ಸುದ್ದಿ

ನನ್ನ ಜೀವನದಲ್ಲಿ ವಿವಾದಗಳೇನು ಹೊಸದಲ್ಲ: ಸಂಜನಾ ಗಲ್ರಾಣಿ

ಗಲ್ರಾನಿ ಸೋದರಿಯರು ದಕ್ಷಿಣ ಭಾರತ ಸಿನಿಕ್ಷೇತ್ರದಲ್ಲಿ ಚಿರಪರಿಚಿತರು. ನಿಕ್ಕಿ ಗಲ್ರಾನಿ ತಮಿಳು ಸಿನಿಮಾದಲ್ಲಿ...

ಗಲ್ರಾನಿ ಸೋದರಿಯರು ದಕ್ಷಿಣ ಭಾರತ ಸಿನಿಕ್ಷೇತ್ರದಲ್ಲಿ ಚಿರಪರಿಚಿತರು. ನಿಕ್ಕಿ ಗಲ್ರಾನಿ ತಮಿಳು ಸಿನಿಮಾದಲ್ಲಿ ಹೆಚ್ಚು ಜನಪ್ರಿಯವಾಗಿದ್ದರೆ, ಸಂಜನಾ ಗಲ್ರಾನಿ ಕನ್ನಡ ಮತ್ತು ತೆಲುಗು ಸಿನಿಪ್ರಿಯರಿಗೆ ಪರಿಚಿತ. ಸಂಜನಾ ಚೆನ್ನೈಗೆ ಹೋದರೆ ನಿಕ್ಕಿ ಸೋದರಿ ಎಂದು ಹೇಳಿದರೆ ನಿಕ್ಕಿ ಕರ್ನಾಟಕಕ್ಕೆ ಬಂದರೆ ಸಂಜನಾ ಸೋದರಿ ಎಂದು ಗುರುತಿಸುತ್ತಾರೆ.

ಸಂಜನಾ ಸಿನಿಮಾ ಕ್ಷೇತ್ರಕ್ಕೆ ಬಂದು ಹತ್ತು ವರ್ಷಕ್ಕೂ ಹೆಚ್ಚು ಪೂರೈಸಿರುವ ಸಂಜನಾ ತೆಲುಗು ಮತ್ತು ಕನ್ನಡದಲ್ಲಿ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ. ಇದೀಗ ಸಂಜನಾ ಅರ್ಕ ಮೀಡಿಯಾ ನಿರ್ಮಾಣದ ಸ್ವರ್ಣ ಖಡ್ಗಮ್ ಗೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಸಂದರ್ಶನ ನಡೆಸಿದಾಗ-

1. ತಮಿಳು ಸಿನಿಮಾದಲ್ಲಿ ಮೊದಲು ನಟಿಸಿದವರು ನೀವು, ಆದರೆ ನಂತರ ಅಲ್ಲಿ ನಟಿಸಲೇ ಇಲ್ಲವಲ್ಲ?
-ಒರು ಕಾದಲ್ ಸೈವೀರ್ ಚಿತ್ರದಲ್ಲಿ ಹತ್ತು ವರ್ಷಗಳ ಹಿಂದೆ ನಟಿಸಿದಾಗ ನಾನು ದ್ವಿತೀಯ ಪಿಯುಸಿಯಲ್ಲಿದ್ದೆ. ಅದು ಅನುಭವ ಗಳಿಸಲು ನಾನು ಮಾಡಿದ ಸಿನಿಮಾ. ಚಿತ್ರ ಬಿಡುಗಡೆಯಾಗಲಿಲ್ಲ. 2006ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಗಂಡ ಹೆಂಡತಿ ನಂತರ ನನಗೆ ಪ್ರಭಾಸ್ ನಟನೆಯ ತೆಲುಗಿನ ಬುಜ್ಜಿಗಾಡುವಿನಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತು.
ನನಗೆ ಜನಪ್ರಿಯತೆ ಸಿಗುವುದನ್ನು ಕಂಡು ತಮಿಳು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದರು. ಹೀಗಾಗಿ ಆ ಚಿತ್ರ ನನ್ನ ಮೊದಲ ಚಿತ್ರ ಎನಿಸಿತು. ಒಟ್ಟಾರೆ ನನ್ನ ಮೊದಲ ಚಿತ್ರದ ಬಗ್ಗೆ ಇಡೀ ಗೊಂದಲವಿದೆ.

ಅಸಮಾಧಾನವಿದೆಯೇ?
-ವಿಕಿಪಿಡಿಯಾದಲ್ಲಿ ನಾನು ಮಾಡದಿರುವ ಸಿನಿಮಾಗಳು ಇದ್ದು ನಾನು ಮಾಡಿರುವ ಕಿಂಗ್ ಮತ್ತು ಕಮಿಷನರ್ ನಂತಹ ಸಿನಿಮಾಗಳ ಹೆಸರನ್ನು ನಮೂದಿಸಿಲ್ಲ. ನಾನು ಮಮ್ಮುಟ್ಟಿ, ಮೋಹನ್ ಲಾಲ್, ಪ್ರಭಾಸ್, ಪವನ್ ಕಲ್ಯಾಣ್, ಪುರಿ ಜಗನ್ನಾಥ್ ಅಂತವರ ಜೊತೆ ಸಿನಿಮಾ ಮಾಡಿದ್ದೇನೆ. ಕೆಲವು ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ, ಆದರೆ ಅವು ಆನ್ ಲೈನ್ ನಲ್ಲಿ ಪಟ್ಟಿಯಾಗಿಲ್ಲ.

ಹೀರೋಯಿನ್ ಗಳು ವೃತ್ತಿಯಲ್ಲಿ ಒಂದು ಹಂತ ತಲುಪಿದ ನಂತರ ಆದ್ರೀಕರಣ ಭಾವನೆ ಬಂದುಬಿಡುತ್ತದೆ. ನಂತರ ಮರ ಸುತ್ತಲು, ಹೀರೋಗಳ ಹಿಂದೆ ಹೋಗುವ ಪಾತ್ರ ಮಾಡಲು ಮನಸ್ಸಾಗುವುದಿಲ್ಲ. ಅದು ತ್ರಿಶಾ, ನಯಂತಾರಾ, ಅನುಷ್ಕಾ ಅಥವಾ ಇನ್ನಾರೇ ಆಗಿರಲಿ. ಆದರೆ ನಾನು ಇನ್ನೂ ಅಂತಹ ಪಾತ್ರಗಳನ್ನು ಮಾಡಲು ಇಚ್ಛಿಸುತ್ತೇನೆ. ಅದರಲ್ಲಿ ಕೆಲಸ ಕಡಿಮೆ, ಆದರೆ ಜನಪ್ರಿಯತೆ ಹೆಚ್ಚು. ಆದರೆ ಕೊನೆಗೆ ನಾವು ಮಾಡುವ ಕೆಲಸದಲ್ಲಿ ನಮಗೆ ತೃಪ್ತಿ ಸಿಗಬೇಕಾದ್ದು ಮುಖ್ಯ.

ಅದಕ್ಕಾಗಿ ನೀವು ಸ್ವರ್ಣ ಖಡ್ಗಮ್ ಒಪ್ಪಿಕೊಂಡಿರಾ?
-ಇದನ್ನು ನಾನು ಧಾರವಾಹಿ ಎಂದು ಕರೆಯಲು ಇಷ್ಟಪಡುವುದಿಲ್ಲ, ಒಂದು ಎಪಿಸೋಡ್ ಗೆ 2-3 ಲಕ್ಷ ಖರ್ಚುಮಾಡಿ ಸಣ್ಣ ಬಜೆಟ್ ನಲ್ಲಿ ಅಳುವ ಪಾತ್ರ ಮಾಡುವ ಪಾತ್ರಗಳಲ್ಲ. ಪ್ರತಿ ಎಪಿಸೋಡ್ ಗೆ 38ರಿಂದ 40 ಲಕ್ಷ ರೂಪಾಯಿ ಖರ್ಚಾಗಿದೆ. ಅದರಲ್ಲಿ ನನ್ನ ಸಾಮ್ರಾಜ್ಯ, ಹೀರೋ ಮತ್ತು ವಿಲನ್ ಸಾಮ್ರಾಜ್ಯ ರಚನೆಗೆ ಕೋಟಿಗಟ್ಟಲೆ ಹಣ ಖರ್ಚಾಗಿದೆ. ತೆಲುಗಿನಲ್ಲಿ ಇದನ್ನು ಮಾಡಿದರೂ ಕೂಡ ಭಾರತದಲ್ಲಿ 10 ಭಾಷೆಗಳಲ್ಲಿ ಲಭ್ಯವಾಗುತ್ತದೆ.

 ಇದರಲ್ಲಿ ಅವಕಾಶ ಹೇಗೆ ಸಿಕ್ಕಿತು?

ದಂಡುಪಾಳ್ಯ 2 ಮತ್ತು ಟು ಕಂಟ್ರೀಸ್ ಗೆ ಕೆಲಸ ಮಾಡುವಾಗ ಸರ್ದಾರ್ ಗಬ್ಬರ್ ಸಿಂಗ್ ಪೂರೈಸಿದೆ. ಆಗ ಅರ್ಕಾ ಮೀಡಿಯಾದಿಂದ ನನಗೆ ಕರೆ ಬಂತು. ಬಾಹುಬಲಿ ಚಿತ್ರ ನಿರ್ಮಿಸಿದ ಸಂಸ್ಥೆಯದು. ಅಂತಹ ಕಡೆಯಿಂದ ಕರೆ ಬಂತೆಂದರೆ ಎರಡು ಯೋಚಿಸದೆ ಮರುದಿನವೇ ಹೈದರಾಬಾದ್ ಗೆ ತೆರಳಿದೆ. ನಾನು ಸಹಿ ಮಾಡಿದಾಗ ತೆಲುಗಿನಲ್ಲಿ ಮಾತ್ರ ತಯಾರಾಗಿತ್ತು. ಇದೀಗ ತಮಿಳು, ಬಂಗಾಳಿಯಲ್ಲಿ ಬಿಡುಗಡೆಯಾಗಿದ್ದು ಆಗಸ್ಟ್ 5ರಂದು ಒರಿಯಾ ಭಾಷೆಯಲ್ಲಿ, ಅಕ್ಟೋಬರ್ ನಲ್ಲಿ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

-ಧಾರವಾಹಿ ಯಾವುದರ ಬಗ್ಗೆ?
-ಮಣಿಪುರದ ಮಹಾಸಾಮ್ರಾಜ್ಯ ಅತಿ ಸಂಪದ್ಭರಿತ ಸಾಮ್ರಾಜ್ಯ. ಅದಕ್ಕೆ ಕಾರಣ ಸ್ವರ್ಣ ಖಡ್ಗ. ಇದರಲ್ಲಿ ವಿಲನ್ ಅತಿ ಶಕ್ತಿಶಾಲಿ ಮನುಷ್ಯ. ಆದರೆ ಆತ ವಿಧೇಯನಲ್ಲ. ಅವನಲ್ಲಿ ಧಾರಾಳ ಸಂಪತ್ತಿದೆ. ಇದರಲ್ಲಿ ನಾನು ಮಹಾರಾಣಿ ಮಹಾಧಾತ್ರಿ ಪಾತ್ರ ಮಾಡುತ್ತಿದ್ದೇನೆ.

ಮುಂದೆ ವೆಬ್ ಸಿರೀಸ್ ಮಾಡುವ ಯೋಜನೆಯಿದೆಯೇ?

-ಸಿನಿಜಗತ್ತು ಹೆಚ್ಚು ವಿಸ್ತಾರವಾಗುತ್ತಿದೆ. ಸೇಕ್ರೆಡ್ ಗೇಮ್ಸ್ ನಂತದ್ದು ಮಾಡಬೇಕೆಂದೆದ್ದಿದ್ದೇನೆ. ನನ್ನ ಸಿನಿಮಾ ಜೀವನದಲ್ಲಿ ಸಾಕಷ್ಟು ವಿವಾದಗಳನ್ನು ಎದುರಿಸಿದ್ದರೂ ನಗ್ನತೆಯಂತಹ ಪಾತ್ರಗಳನ್ನು ಮಾಡಲು ಇಷ್ಟಪಡುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT