ಚಿರಂಜೀವಿ 
ಸಿನಿಮಾ ಸುದ್ದಿ

ಚಿರಂಜೀವಿ, ಸುದೀಪ್ ನಟನೆಯ ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಸ್ಥಗಿತ!

ಟಾಲಿವುಡ್ ಮೇಘಾ ಸ್ಟಾರ್ ಚಿರಂಜೀವಿ ಮತ್ತು ಸುದೀಪ್ ಅಭಿನಯದ ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಸ್ಧಗಿತಗೊಳಿಸಲಾಗಿದೆ. ಅನುಮತಿ ಇಲ್ಲದೆ ನಿರ್ಮಿಸಲಾಗಿದ್ದು ಬೃಹತ್...

ಟಾಲಿವುಡ್ ಮೇಘಾ ಸ್ಟಾರ್ ಚಿರಂಜೀವಿ ಮತ್ತು ಸುದೀಪ್ ಅಭಿನಯದ ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಸ್ಧಗಿತಗೊಳಿಸಲಾಗಿದೆ. ಅನುಮತಿ ಇಲ್ಲದೆ ನಿರ್ಮಿಸಲಾಗಿದ್ದು ಬೃಹತ್ ಶೂಟಿಂಗ್ ಸೆಟ್ ಅನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. 
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಸಿರಿಲಿಂಗಂಪಲ್ಲಿ ಎಂಬಲ್ಲಿ ನಡೆಯುತ್ತಿತ್ತು. ಶೂಟಿಂಗ್ ಗಾಗಿ ಬೃಹತ್ ಸೆಟ್ ಕೂಡ ನಿರ್ಮಿಸಲಾಗಿತ್ತು. ಆದರೆ ಇದಕ್ಕೆ ಅನುಮತಿ ಪಡೆಯದಿರುವ ಕಾರಣದಿಂದ ಆದಾಯ ಅಧಿಕಾರಿಗಳು ಶೂಟಿಂಗ್ ಸೆಟ್ ಅನ್ನು ಧ್ವಂಸಗೊಳಿಸಿದ್ದಾರೆ. 
ಇನ್ನು ರಾಮ್ ಚರಣ್ ತೇಜ್ ಅಭಿನಯದ ರಂಗಸ್ಥಳಂ ಚಿತ್ರದ ಶೂಟಿಂಗ್ ಸಹ ಇದೇ ಜಾಗದಲ್ಲಿ ನಡೆದಿತ್ತು. ಅಂದು ಚಿತ್ರೀಕರಣಕ್ಕೆ ಅನುಮತಿ ಪಡೆಯಲಾಗಿತ್ತು. ಆದರೆ ಸದ್ಯ ನಡೆಯುತ್ತಿರುವ ಸೈರಾ ಚಿತ್ರಕ್ಕೆ ಹೊಸ ಅನುಮತಿ ಪಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಸುರೇಂದರ್ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಕನ್ನಡದ ನಟ ಸುದೀಪ್, ಜಗಪತಿ ಬಾಬು, ಸೇತುಪತಿ ಸೇರಿದಂತೆ ನಟ-ನಟಿಯರ ದಂಡೇ ಚಿತ್ರದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT