ಕಥೆಯೊಂದು ಶುರುವಾಗಿದೆ ಚಿತ್ರ 
ಸಿನಿಮಾ ಸುದ್ದಿ

ನಟನ ಯಶಸ್ಸು ಚಿತ್ರದ ಕಥೆಯನ್ನು ಅವಲಂಬಿಸಿರುತ್ತದೆ: ದಿಗಂತ್

ನಾಳೆ ಶುಕ್ರವಾರ ದಿಗಂತ್ ಅವರ ಕಥೆಯೊಂದು ಶುರುವಾಗಿದೆ ಚಿತ್ರ ಬಿಡುಗಡೆಯಾಗುತ್ತಿದೆ. ಸಾಕಷ್ಟು ನಿರೀಕ್ಷೆ ...

ನಾಳೆ ಶುಕ್ರವಾರ ದಿಗಂತ್ ಅವರ ಕಥೆಯೊಂದು ಶುರುವಾಗಿದೆ ಚಿತ್ರ ಬಿಡುಗಡೆಯಾಗುತ್ತಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಬಗ್ಗೆ ದಿಗಂತ್ ಗೆ ಆರು ವರ್ಷಗಳ ಹಿಂದೆ ಲೈಫು ಇಷ್ಟೇನೆ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಉಂಟಾಗಿದ್ದ ಭಾವನೆಯೇ ಮರುಕಳಿಸಿದೆಯಂತೆ.

ಸಾಮಾನ್ಯವಾಗಿ ಸಿನಿಮಾದಲ್ಲಿ ನಾಯಕನ ಇರುವಿಕೆ ಚಿತ್ರಕ್ಕೆ ವಿಶೇಷ ಒತ್ತು ನೀಡುತ್ತದೆ. ಆದರೆ ನನಗೆ ಚಿತ್ರದಲ್ಲಿ ಕಥೆಯೇ ಮುಖ್ಯವಾಗುತ್ತದೆ. ಕಥೆ ನೋಡಿದ ಮೇಲೆ ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಸಹಿ ಹಾಕಿದೆ. ಚಿತ್ರದ ಕಥೆ, ಹಾಡು ಮತ್ತು ತಂತ್ರಜ್ಞಾನಗಳು ಉತ್ತಮವಾಗಿ ಮೂಡಿಬಂದಿದೆ ಎನ್ನುತ್ತಾರೆ ದಿಗಂತ್.

ಗಾಂಧಿನಗರಕ್ಕೆ ಕಾಲಿಟ್ಟ ದಿನಗಳಲ್ಲಿ ದಿಗಂತ್ ಸಿನಿಮಾದಲ್ಲಿ ಅವಕಾಶಕ್ಕಾಗಿ ಸಾಕಷ್ಟು ಕಷ್ಟಪಟ್ಟವರು. ಮಿಸ್ ಕ್ಯಾಲಿಫೋರ್ನಿಯಾ ಆದ ನಂತರ ನನಗೆ ಏನೂ ಕೆಲಸವಿರಲಿಲ್ಲ. ಆ ಮೇಲೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಮನೆಯಲ್ಲಿ ನನ್ನ ಬಗ್ಗೆ ಗಾಬರಿಪಡಬೇಡಿ, ನನ್ನ ಜೀವನ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಹತ್ತು ವರ್ಷಗಳ ಹಿಂದೆ ಓದಿನಲ್ಲಿ ಆಸಕ್ತಿಯಿಲ್ಲದವರು ಸಿನಿಮಾಕ್ಕೆ ಬರುತ್ತಾರೆ ಎಂಬ ಭಾವನೆಯಿತ್ತು. ನಾನು ತಂದೆಯಲ್ಲಿ ಜಗಳ ಮಾಡಿಕೊಂಡು ಸಿನಿಮಾಕ್ಕೆ ಬಂದೆ. ಅದಕ್ಕೆ ಸರಿಯಾಗಿ ನನ್ನ ಮೊದಲ ಸಿನಿಮಾ ಯಶಸ್ಸು ಗಳಿಸಲಿಲ್ಲ. ಈ ಎಲ್ಲಾ ವಿಷಯಗಳಿಂದ ನಾನು ಅಪ್ ಸೆಟ್ ಆಗಿದ್ದೆ. ನನಗೆ ಕೆಲಸ ಕೂಡ ಇರಲಿಲ್ಲ ಎಂದು ಹಳೆಯ ಕಷ್ಟದ ದಿನಗಳನ್ನು ಮೆಲುಕು ಹಾಕಿದರು.

ಆರಂಭದ ದಿನಗಳಲ್ಲಿ ಗಾಂಧಿನಗರದ ಮೂಲೆ ಮೂಲೆಗಳಿಗೆ ಹೋಗಿ ಅವಕಾಶ ನೀಡಿ ಎಂದು ದಿಗಂತ್ ಕೇಳುತ್ತಿದ್ದರಂತೆ. ಒಂದು ಹಂತದಲ್ಲಿ ಈ ಕ್ಷೇತ್ರ ಬಿಡಬೇಕು ಎಂದು ಕೂಡ ಅವರಿಗೆ ಅನಿಸಿದ್ದುಂಟು. ಆ ಸಂದರ್ಭದಲ್ಲಿ ಮಾಡೆಲಿಂಗ್ ಗೆ ಕಾಲಿಟ್ಟ ದಿಗಂತ್ ಕಮರ್ಷಿಯಲ್ ಜಾಹಿರಾತುಗಳಲ್ಲಿ ನಟಿಸಲು ಆರಂಭಿಸಿದರು. ಅದು ಹೊಟ್ಟೆ ತುಂಬಿಸಲು. ಈ ಮಧ್ಯೆ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು.

ಆ ಹೊತ್ತಿಗೆ ಮುಂಗಾರು ಮಳೆಯಲ್ಲಿ ಒಂದು ಪಾತ್ರ ಮಾಡಲು ಅವಕಾಶ ಸಿಕ್ಕಿತು. ಆರಂಭದಲ್ಲಿ ಅದನ್ನು ತಿರಸ್ಕರಿಸಿದರಂತೆ, ಏಕೆಂದರೆ ಪೂರ್ಣ ಪ್ರಮಾಣದ ನಾಯಕನ ಪಾತ್ರ ಮಾಡಲು ಅವರು ಬಯಸಿದ್ದರು. ಆ ಸಮಯದಲ್ಲಿ ಸುಧಾ ಬೆಳವಾಡಿಯವರ ಪತಿ ಸತ್ಯ ಈ ಪಾತ್ರವನ್ನು ಒಪ್ಪಿಕೊಳ್ಳಿ ಎಂದು ಹೇಳಿದರಂತೆ. ಈಗ ಆ ಚಿತ್ರವನ್ನು ಒಪ್ಪಿಕೊಂಡಿದ್ದು ಒಳ್ಳೆಯದಾಯಿತು, ನನಗೆ ಮುಂದೆ ವೃತ್ತಿಯಲ್ಲಿ ಅನೇಕ ಅವಕಾಶಗಳು ಸಿಕ್ಕಿದವು ಎನ್ನುತ್ತಾರೆ.

ಕುನಲ್ ಕೊಹ್ಲಿಯ ರಾಮಾಯಣದಲ್ಲಿ ರಾಮ ಪಾತ್ರ:
ವೆಡ್ಡಿಂಗ್ ಪಲಾವ್ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ದಿಗಂತ್ ಕುನಲ್ ಕೊಹ್ಲಿ ನಿರ್ದೇಶನದ ಸಿನಿಮಾದಲ್ಲಿ ರಾಮನ ಪಾತ್ರ ಮಾಡಲಿದ್ದಾರೆ. ಸೆಪ್ಟೆಂಬರ್ ನಲ್ಲಿ ಅದರ ಚಿತ್ರೀಕರಣ ಆರಂಭವಾಗಲಿದ್ದು ಬಳಿಕ ಸುನಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

SCROLL FOR NEXT