ವಾಸು ನಾನು ಪಕ್ಕಾ ಕಮರ್ಷಿಯಲ್ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಚಿತ್ರ ಬಿಡುಗಡೆ ಮುನ್ನ ಒತ್ತಡದಲ್ಲಿ ನಟ ಹಾಗೂ ನಿರ್ಮಾಪಕ ಅನಿಶ್ ತೇಜೇಶ್ವರ್

ನಿರ್ಮಾಪಕರಾಗುವ ಮೂಲಕ ನಿರ್ಮಾಪಕರ ಸವಾಲುಗಳನ್ನು ಎದುರಿಸಿದ್ದಾರೆ ನಟ ಅನಿಶ್ ...

ನಿರ್ಮಾಪಕರಾಗುವ ಮೂಲಕ ನಿರ್ಮಾಪಕರ ಸವಾಲುಗಳನ್ನು ಎದುರಿಸಿದ್ದಾರೆ ನಟ ಅನಿಶ್ ತೇಜೇಶ್ವರ್.

ವಿಂಕ್ ವಿಸಿಲ್ ಬ್ಯಾನರ್ ನಡಿ ಅಜಿತ್ ವಾಸನ್ ಉಗ್ಗಿನ ನಿರ್ದೇಶನದ ವಾಸು ನಾನು ಪಕ್ಕಾ ಕಮರ್ಷಿಯಲ್ ಚಿತ್ರ ನಾಳೆ ಬಿಡುಗಡೆಯಾಗಲಿದೆ. ಸಹಜವಾಗಿ ನಿರ್ಮಾಪಕರಾಗಿ ಮತ್ತು ಚಿತ್ರದ ನಾಯಕನಾಗಿ ಅನಿಶ್ ತೇಜೇಶ್ವರ್ ಒತ್ತಡ, ಆತಂಕದಲ್ಲಿದ್ದಾರೆ.

ಈ ಚಿತ್ರದ ನಿರ್ಮಾಪಕನಾಗಿ ನನಗೆ ಚಿತ್ರದ ಬಿಡುಗಡೆ ವಾರದಲ್ಲಿರುವ ಒತ್ತಡ, ಆತಂಕ ಅನುಭವವಾಗಿದೆ. ಸಿನಿಮಾ ಕ್ಷೇತ್ರದಲ್ಲಿ ನಿರ್ಮಾಪಕನ ಜವಾಬ್ದಾರಿ ತುಂಬಾ ಕಷ್ಟವಾದದ್ದು. ಈ ಸಿನಿಮಾದಲ್ಲಿ ಕೇವಲ ನಟನಾಗಿ ಕೆಲಸ ಮಾಡಬೇಕಾಗಿತ್ತು ಎಂದು ನನಗೆ ಇತ್ತೀಚೆಗೆ ಅನಿಸಲು ಆರಂಭವಾಗಿದೆ, ಆದರೆ ಇದೊಂದು ಕಲಿಕೆಯ ದಾರಿ ಎಂದು ಭಾವಿಸುತ್ತೇನೆ ಎಂದರು ಅನಿಶ್.

ನಾಳೆ ಈ ಸಿನಿಮಾ ರಾಜ್ಯಾದ್ಯಂತ 150 ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ತಯಾರಿಸುವ ಸಂದರ್ಭದಲ್ಲಿ ಸುಲಭವಾಗಿತ್ತು. ನಂತರ ಬಿಡುಗಡೆ ಸಮಯದಲ್ಲಿ ಟೆನ್ಷನ್ ಆಗುತ್ತದೆ. ಈಗ ದಿನದಲ್ಲಿ 24 ಗಂಟೆ ಸಾಕಾಗುವುದಿಲ್ಲ ಎನಿಸುತ್ತದೆ ಎಂದರು.

ಅನೀಶ್ ಏಕೆ ನಿರ್ಮಾಪರಾದರು ಎಂದು ಕೇಳಿದ್ದಕ್ಕೆ, ಒಳ್ಳೆಯ ಸಿನಿಮಾವನ್ನು ಚೆನ್ನಾಗಿ ತರಲಾಗಿದೆ. ಅದು ನನಗೆ ಅತಿದೊಡ್ಡ ಸವಾಲಾಗಿತ್ತು. ಕಥೆ ವಿವರಿಸುವಾಗ ಎಲ್ಲಾ ಸರಿಯಾಗಿದೆ ಎನಿಸುತ್ತದೆ. ಆದರೆ ನಂತರ ಅದನ್ನು ಹೇಗೆ ತೆಗೆದುಕೊಂಡು ಹೋಗುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎನ್ನುತ್ತಾರೆ.

ನಿರ್ಮಾಪಕನಾಗಿ ನನಗೆ ಇದು ಮೊದಲ ಅನುಭವ. ನಾವು ಹಾಕಿದ ಪ್ರಯತ್ನಕ್ಕೆ ಫಲ ಸಿಗುತ್ತದೆ ಎಂದು ನಂಬಿದ್ದೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel