ಹರ್ಷಿಕಾ ಪೂಣಚ್ಚ 
ಸಿನಿಮಾ ಸುದ್ದಿ

ಸಸ್ಪೆನ್ಸ್ ಥ್ರಿಲ್ಲರ್ 'ಉದ್ಘರ್ಷ'ಕ್ಕೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ!

ಕನ್ನಡ ಸಸ್ಪೆನ್ಸ್ ಚಿತ್ರಗಳ ನಿರ್ಮಾಣದಲ್ಲಿ ಹೆಸರಾದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೃಷ್ಟಿಯಾಗಿರುವ "ಉದ್ಘರ್ಷ" ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ.

ಬೆಂಗಳೂರು: ಕನ್ನಡ ಸಸ್ಪೆನ್ಸ್ ಚಿತ್ರಗಳ ನಿರ್ಮಾಣದಲ್ಲಿ ಹೆಸರಾದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೃಷ್ಟಿಯಾಗಿರುವ "ಉದ್ಘರ್ಷ" ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ.
"ತರ್ಕ", "ನಿಷ್ಕರ್ಷ", "ಉತ್ಕರ್ಷ" ಸೇರಿ ಹಲು ಚಿತ್ರಗಳನ್ನು ತಯಾರಿಸಿರುವ ದೇಸಾಯಿ ಈ ಚಿತ್ರವನ್ನು ಸಹ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತಯಾರಿಸುತ್ತಿದ್ದಾರೆ. ಚಿತ್ರವು ತಮಿಳು ಹಾಗೂ ಮಲಯಾಳಂ ಗೆ ಡಬ್ ಆಗುತ್ತದೆಂದು ಅವರು ಹೇಳಿದರು.
ಒಂದು ಆಕ್ಷನ್-ಥ್ರಿಲ್ಲರ್ ಕಥೆಯನ್ನು ಹೊಂದಿರುವ "ಉದ್ಘ್ಹರ್ಷ"ದಲ್ಲಿ ಸಿಂಗಂ - 3  ಖ್ಯಾತಿಯ ಠಾಕೂರ್ ಅನೂಪ್ ಸಿಂಗ್, ಕಬಾಲಿಯ ಧನ್ಸಿಕಾ, ಬಾಹುಬಲಿ ಚಿತ್ರದ ಪ್ರಭಾಕರ್ ಇದ್ದ್ದಾರೆ.
ತನ್ಯಾ ಹೋಪ್, ಶ್ರದ್ದಾ ದಾಸ್, ಕಿಶೋರ್, ವಂಶಿ ಕೃಷ್ಣ, ಸೇರಿ ಅನೇಕ ನಟರು ಅಭಿನಯಿಸಿದ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚುತ್ರಕ್ಕೆ ಬಾಲಿವುಡ್ ಸಂಗೀರ ನಿರ್ದೇಶಕ ಸಂಜಯ್ ಚೌಧರಿ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಚಿತ್ರಕ್ಕೆ ಕೆಂಪರಾಜು ಸಂಕಲನ, ರವಿವರ್ಮ ಸಾಹಸ ನಿರ್ದೇಶನವಿದೆ.ವಿಷ್ಣುವರ್ಧನ್ ಹಾಗು ಪಿ. ರಾಜನ್ ಛಾಯಾಗ್ರಹಣವಿರುವ ಈ ಚಿತ್ರ ಹೈದರಾಬಾದ್, ಮಡಿಕೇರಿ, ಕೇರಳ ಹಾಗೂ ಬೆಂಗಳೂರುಗಳಲ್ಲಿ ಚಿತ್ರೀಕರಣಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!