ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿನ ಐಟಂ ಹಾಡಿಗೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದಾರೆ.
ಯಶ್ ಹಾಗೂ ತಮನ್ನಾ ನಡುವಿನ ಹಾಡಿನ ಚಿತ್ರೀಕರಣ ಮುಕ್ತಾಯವಾಗಿದ್ದು ಒಟ್ಟಾರೆ ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದೆ. ಈ ಹಾಡಿನಲ್ಲಿ ಯಶ್ ಮತ್ತು ತಮನ್ನಾ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಡಾ. ರಾಜ್ ಕುಮಾರ್ ಅಭಿನಯದ ಪರೋಪಕಾರಿ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಸಾಂಗ್ ಅನ್ನು ಕೆಜಿಎಫ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಈ ಸಾಂಗ್ ಶೂಟ್ ನ ಫೋಟೋವೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ.