ಬೆಂಗಳೂರು: ಯುಎಫ್ಒ ಸಮಸ್ಯೆಯಿಂದಾಗಿ ಪಿವಿಆರ್, ಮಾಲ್ ಗಳಲ್ಲಿ ಒಂದಲ್ಲಾ ಎರಡಲ್ಲಾ ಸಿನಿಮಾದ ಸುಮಾರು 56 ಶೋಗಳು ರದ್ದುಗೊಂಡಿತ್ತು. ಆದರೆ ಯುಎಫ್ಒ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಸ್ಥಗಿತಗೊಂಡಿದ್ದ ಪ್ರದೇಶಗಳಲ್ಲೂ ಚಿತ್ರ ಪ್ರದರ್ಶನ ಆ.25 ರಿಂದ ಎಂದಿನಂತೆ ಮುಂದುವರೆಯಲಿದೆ ಎಂದು ಚಿತ್ರ ತಂಡ ಹೇಳಿದೆ.
ಒಂದಲ್ಲಾ ಎರಡಲ್ಲಾ ಚಿತ್ರ ಆ.24 ರಂದು ಬಿಡುಗಡೆಯಾಗಿದ್ದು, ಒಟ್ಟು 80 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಬೇಕಿತ್ತು, ಆದರೆ ಯುಎಫ್ಒ ಸಮಸ್ಯೆಯಿಂದಾಗಿ ಕೇವಲ 23 ಸೆಂಟರ್ ಗಳಲ್ಲಿ ಮಾತ್ರ ಚಿತ್ರ ರಿಲೀಸ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರತಂಡ, ಯುಎಫ್ಒದಲ್ಲಿ ಉಂಟಾಗಿರುವ ಸಮಸ್ಯೆಯಿಂದಾಗಿ ಹಲವೆಡೆ ಚಿತ್ರ ತೆರೆಕಾಣಲು ಸಾಧ್ಯವಾಗಿರಲಿಲ್ಲ. ಆದರೆ ಸಮಸ್ಯೆ ಬಗೆಹರಿದಿದ್ದು, ಆ.25 ರಿಂದ ಎಲ್ಲಾ ಕಡೆ ಪ್ರದರ್ಶನ ಕಾಣಲಿದೆ ಎಂದು ಹೇಳಿದೆ.