ಕೆಜಿಎಫ್ ಟ್ರೈಲರ್ 2 ಬಿಡುಗಡೆ 
ಸಿನಿಮಾ ಸುದ್ದಿ

KGF 2ನೇ ಟ್ರೈಲರ್ ನೋಡಿದ ಬಾಲಿವುಡ್ ಮಂದಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ​ ಕೆಜಿಎಫ್ ಚಿತ್ರದ 2ನೇ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಲಿವುಡ್ ಮಂದಿ ಟ್ರೈಲರ್ ನೋಡಿ ಫುಲ್ ಫಿದಾ ಆಗಿದ್ದಾರೆ.

ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ​ ಕೆಜಿಎಫ್ ಚಿತ್ರದ 2ನೇ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಲಿವುಡ್ ಮಂದಿ ಟ್ರೈಲರ್ ನೋಡಿ ಫುಲ್ ಫಿದಾ ಆಗಿದ್ದಾರೆ.
ಕೆ.ಜಿ.ಎಫ್‌ ಚಿತ್ರತಂಡ ಇವತ್ತು ಒಂದು ಸರ್ಪೈಸ್‌ ಕೊಡುತ್ತೆ ಅಂತ ನಿನ್ನೆ ಫರ್ಹಾನ್‌ ಅಖ್ತರ್‌ ಮತ್ತು ಯಶ್‌ ಟ್ವೀಟ್‌ ಮಾಡಿದ್ದರು. ಅದರಂತ, ಸಂಜೆ ಟ್ರೈಲರ್‌ 2ನ ರಿಲೀಸ್‌ ಮಾಡೋದಾಗಿ ಹೇಳಿದ್ದರು. ಇವತ್ತು ಕೆ.ಜಿ.ಎಫ್‌ ಟೀಮ್‌ ಜೊತೆಗೆ ಫರ್ಹಾನ್‌ ಅಖ್ತರ್‌ ಬಾಲಿವುಡ್‌ ಅಂಗಳದಲ್ಲಿ ಗ್ರ್ಯಾಂಡ್‌ ಆಗಿ ಟ್ರೈಲರ್‌ನ ಲಾಂಚ್‌ ಮಾಡಿದ್ದಾರೆ. 
ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯನ್ನು ಬಾಲಿವುಡ್ ನಟ ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ ವಿತರಣೆ ಮಾಡುತ್ತಿದ್ದು, ಮುಂಬೈನಲ್ಲಿ ಇಂದು ಎಕ್ಸೆಲ್ ಎಂಟರ್ ಟೈನ್ ಮೆಂಟ್ ಸಂಸ್ಥೆ ಕೆಜಿಎಫ್ ಚಿತ್ರದ 2ನೇ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಖ್ಯಾತನಾಮ ಮಾಧ್ಯಮ ಮತ್ತು ಪತ್ರಿಕೆಗಳ ಪತ್ರಕರ್ತರು ಹಾಗೂ ಬಾಲಿವುಡ್ ಮಂದಿ ಟ್ರೈಲರ್ ವೀಕ್ಷಣೆಗಾಗಿ ಆಗಮಿಸಿದ್ದರು. 
ವಿಶೇಷ ಅಂದ್ರೆ, ಬಿಟೌನ್‌ನಲ್ಲಿ ಕೆ.ಜಿ.ಎಫ್‌ 2 ಚಿತ್ರದ ಟ್ರೈಲರ್‌ ನೋಡಿದ ಬಾಲಿವುಡ್‌ ಪತ್ರಕರ್ತರು ಅಕ್ಷರಶಃ ದಂಗಾಗಿದ್ದಾರೆ. ವಾವ್‌ ಏನ್‌ ಮೇಕಿಂಗ್‌ ಗುರು, ಏನಿದು ಸಿನಿಮಾ ರೇಂಜ್‌ ಅಂತ ಹುಬ್ಬೇರಿಸಿದ್ದಾರೆ. ಟ್ರೈಲರ್ ನೋಡಿ ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್