ದಕ್ಷಿಣ ಭಾರತದ ಬಹುನಿರೀಕ್ಷಿತ ಕೆಜಿಎಫ್ ಚಿತ್ರ ವಿಶ್ವಾದ್ಯಂತ ತೆರೆ ಕಾಣುತ್ತಿರುವ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜಾಹುಲಿ ಖ್ಯಾತಿಯ ಯಶ್ ಟ್ವೀಟರ್ ಖಾತೆಯಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಕನ್ನಡಿಗರ ಟೀಕೆಗೆ ಗುರಿಯಾಗಿದ್ದಾರೆ. ಯಶ್ ಟ್ವೀಟರ್ ಖಾತೆಯಲ್ಲಿ ನಿಮ್ಮ ಯಶ್ ಎಂದಿದ್ದ ಹೆಸರನ್ನು ದಿ ನೇಮ್ ಈಸ್ ಯಶ್ ಎಂದು ಬದಲಿಸಿಕೊಂಡಿದ್ದಾರೆ.
ಯಶ್ ಹೆಸರು ಬದಲಿಸಿಕೊಂಡಿರುವುದು ಕನ್ನಡಿಗರನ್ನು ಕೆರಳಿಸಿದ್ದು ಟ್ವೀಟರ್ ಮತ್ತು ಫೇಸ್ ಬುಕ್ ನಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಬೆಳೆಯೋವರೆಗೂ ಅಣ್ತಮ್ಮ, ಬೆಳೆದ್ಮೇಲೆ ಭಾಯ್, ಕನ್ನಡದ ಮೇಲಿನ ಪ್ರೀತಿ ಇಷ್ಟೇನಾ? ಎಂದು ಟೀಕಿಸುತ್ತಿದ್ದಾರೆ.