ಬೆಂಗಳೂರು: "ಸಾರ್ವಜನಿಕರಿಗೆ ಸುವರ್ಣಾವಕಾಶ" ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಧನ್ಯಾ ಬಾಲಕೃಷ್ಣ ಇದೀಗ ಮತ್ತೊಂದು ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ಈ ಬಾರಿ ಅವರು ತಮ್ಮ ಗುರು , ಮಾರ್ಗದರ್ಶಕನಾಗಿರುವ ನಿರ್ದೇಶಕ ಗಿರಿರಾಜ್ ಬಿಎಂ ಅವರ "ಸುರಗಿ" ಚಿತ್ರದಲ್ಲಿ ನಾಯಕಿಯಾಗಿ ಪಾತ್ರ ವಹಿಸುತ್ತಿದ್ದಾರೆ.
ಮನು ಗೌಡ ನಾಯಕನಾಗಿರುವ ಈ ಚಿತ್ರ ಗಿರಿರಾಜ್ ಹಾಗೂ ಧನ್ಯಾ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರವಾಗಿದೆ. ಇದಕ್ಕೆ ಮುನ್ನ ಈ ಜೋಡಿ "ರಕ್ತಚಂದನ" ಎಂಬ ವೆಬ್ ಸೀರೀಸ್ ನಲ್ಲಿ ಜತೆಯಾಗಿ ಕೆಲಸ ಮಾಡಿದ್ದರು.
"ನಾನು ಕಳೆದ ಎಂಟು ವರ್ಷಗಳಿಂದ ಗಿರಿರಾಜ್ ಅವರನ್ನು ಬಲ್ಲೆ, ನಾನು ಕಾಲೇಜಿನಲ್ಲಿದ್ದಾಗಲಿಂದ ನನಗೆ ರಂಗದ ಮೇಲಿನ ನಟನೆಯ ಕುರಿತಂತೆ ಅವರೇ ತರಬೇತಿ ನೀಡಿದ್ದಾರೆ. ಇದೀಗ ಅವರೊಡನೆ ಕೆಲಸ ಮಾಡುವ ಅವಕಾಶವನ್ನು ನಾನೆಂದಿಗೂ ಬಿಟ್ಟುಕೊಡುವುದಿಲ್ಲ" ಧನ್ಯಾ ಹೇಳಿದ್ದಾರೆ.
"ನಾನು ನಯನಾತಾರಾ, ಕಂಗನಾ ರಣೌತ್ ಅವರ ಅಭಿನಯವನ್ನು ಮೆಚ್ಚುತ್ತೇನೆ. ಅವರಿಂದ ನಾನು ಸ್ಪೂರ್ತಿ ಪಡೆಯುತ್ತೇನೆ.ಸುರಗಿ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದ್ದು ಸಾಕಷ್ಟು ಜವಾಬ್ದಾರಿಯುತವಾಗಿದೆ. ನಾನು ಈ ಮೂಲಕ ನನ್ನ ಭವಿಷ್ಯವನ್ನು ಕಾಣುತ್ತಿದ್ದೇನೆ" ಅವರು ಹೇಳಿದ್ದಾರೆ. "ಸುರಗಿ" ಚಿತ್ರ ಜನವರಿ 15ರ ನಂತರ ಸೆಟ್ಟೇರುವ ನಿರೀಕ್ಷೆ ಇದೆ.
"ಸುರಗಿ" ಚಿತ್ರದ ನಿರ್ಮಾಪಕಿ ಭಾವನಾ ಬಗೆಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿರುವ ನಟಿ ಧನ್ಯಾ ಭಾವನಾ ತಮ್ಮ ಹೋಮ್ ಟೌನ್ ಪ್ರೊಡಕ್ಷನ್ ನಲ್ಲಿ ಸದಾ ಉತ್ತಮ ಪಾತ್ರಗಳನ್ನೇ ಆಯ್ಕ್ಕೆ ಮಾಡುತ್ತಾರೆ ಎಂದಿದ್ದಾರೆ.