ಸಿನಿಮಾ ಸುದ್ದಿ

'ಬಿಚ್ಚುಗತ್ತಿ' ಹೆಚ್ಚುಕಡಿಮೆ ನನ್ನ ಚೊಚ್ಚಲ ಚಿತ್ರವಾಗಲಿದೆ: ರಾಜವರ್ಧನ್

Raghavendra Adiga
ಬೆಂಗಳೂರು: ಹರಿ ಸಂತೋಸ್ ನಿರ್ದೇಶನದ ರಾಜವರ್ಧನ್ ನಾಯಕನಾಗಿರುವ "ಬಿಚ್ಚುಗತ್ತಿ" ಚಿತ್ರಕ್ಕೆ ಮಹೂರ್ತ ನೆರವೇರಿದೆ. ಹದಿನೈದನೇ ಶತಮಾನದ ಬಿಚ್ಚುಗತ್ತಿ ಭರಮಣ್ಣ ನಾಯಕನ ಜೀವನಾಧಾರಿತ ಚಿತ್ರ ಇದಾಗಲಿದ್ದು ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭಾರಂಭ ಕೋರಿದ್ದಾರೆ.
ಬಿ.ಎಲ್. ವೇಣು ಅವರ ಕಥಾ ಆಧಾರಿತ ಚಿತ್ರ ಇದಾಗಿದ್ದು ರಾಜವರ್ಧನ್ ಪಾಲಿನ ನಾಲ್ಕನೇ ಚಿತ್ರವಾಗಿದೆ. ಇದಾಗಲೇ ಬಿಡುಗಡೆಯಾಗಿರುವ ಬಹುತಾರಾಂಗಣದ "ನೂರೊಂದು ನೆನಪು" ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟ ರಾಜವರ್ಧನ್ ಇನ್ನೆರಡು ಚಿತ್ರಗಳಾದ ಫ್ಲೈ ಹಾಗೂ ಇರಾದಲ್ಲಿ ಸಹ ಅಭಿನಯಿಸಿದರೂ ಅವು ಇನ್ನೂ ಬಿಡುಗಡೆಯ ಭಾಗ್ಯ ಕಂಡಿಲ್ಲ.
ಕಳೆದ ವರ್ಷ ಸುಮಾರು ಇದೇ ಅವಧಿಯಲ್ಲಿ ನಿರ್ಮಾಪಕರು ನನಗೆ ಬಿ.ಎಲ್. ವೇಣು ಅವರ ಐತಿಹಾಸಿಕ ಕಾದಂಬೈಯನ್ನು ನೀಡಿದ್ದರು. ಮೂರು ದಿನಗಳ ಕಾಲ ಓದಿದಿದ ಬಳಿಕ ನಾನು ಈ ಚಿತ್ರದಲ್ಲಿ ಪಾತ್ರವಹಿಸಲು ಒಪ್ಪಿಕೊಂಡಿದ್ದೆ ಎಂದು ರಾಜವರ್ಧನ್ ಹೇಳುತ್ತಾರೆ.
ಈ ಚಿತ್ರಕ್ಕಾಗಿ ಕುದುರೆ ಸವಾರಿ, ಕಳರಿಪಯಟ್ಟುವಿನಂತಹಾ ಸಮರ ಕಲೆಗಳ ಅಭ್ಯಾಸ ನಡೆಸಿದ್ದ ರಾಜವರ್ಧನ್ ಕಳೆದ ಒಂದು ವರ್ಷದಿಂದ ನಾನು ಈ ಪಾತ್ರದ ತಯಾರಿಯಲ್ಲಿ ತೊಡಗಿದ್ದೆ. ಇದಕ್ಕಾಗಿ ಸಾಕಷ್ಟು ದೇಹದಂಡನೆಯನ್ನು ಮಾಡಿದ್ದೇನೆ. ಅಂತಿಮವಾಗಿ ಚಿತ್ರ ಸೆಟ್ಟೇರಲು ತಯಾರಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಿರ್ದೇಶಕ ಹರಿ ಸಂತೋಷ್ ನನಗೆ ಕೆಲ ವರ್ಷಗಳಿಂದ ಗೊತ್ತು. ಅವರು ನನ್ನ ಒಳ್ಳೆಯ ಸ್ನೇಹಿತರೂ ಸಹ ಆಗಿದ್ದಾರೆ ಎನ್ನುವ ನಟ ಈಗ ತನ್ನ ಮಿತ್ರರೊಡನೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಸಂತಸಗೊಂಡಿದ್ದಾರೆ. ಅಲ್ಲದೆ ದರ್ಶನ್ ಮಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮಗೆ ದೊಡ್ಡ ಬೆಂಬಲ ಸಿಕ್ಕಿದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
SCROLL FOR NEXT