ಮುಂಬೈ: ತಾವು ಹೊಟ್ಟೆ ಕ್ಯಾನ್ಸರ್'ನಿಂದ ಬಳಲುತ್ತಿರುವುದಾಗಿ ಹಬ್ಬಿರುವ ಸುದ್ದಿಗಳಿಗೆ ಬಾಲಿವುಡ್ ನಟ ಶಾಹಿದ್ ಕಪೂರ್ ಸೋಮವಾರ ತಳ್ಳಿಹಾಕಿದ್ದಾರೆ.
ವದಂತಿಗಳ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾನು ಚೆನ್ನಾಗಿದ್ದೇನೆ. ಗಾಳಿ ಮಾತನ್ನು ನಂಬಬೇಡಿ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.
ನಟಿ ಸೋನಾಲಿ ಬೇಂದ್ರೆ, ಇರ್ಫಾನ್ ಖಾನ್ ಕ್ಯಾನ್ಸರ್'ಗೆ ಚಿಕಿತ್ಸೆ ಪಡೆಯುತ್ತಿರುವ ಬೆನ್ನಲ್ಲೇ ಶಾಹಿದ್ ಕಪೂರ್ ಕುರಿತು ವದಂತಿಗಳು ಹಬ್ಬಿ, ಅಭಿಮಾನಿಗಳನ್ನು ಆತಂಕಕ್ಕೆ ಗುರಿ ಮಾಡಿತ್ತು.