ಆರೋಹಿ ನಾರಾಯಣ್ 
ಸಿನಿಮಾ ಸುದ್ದಿ

ಆಕಾಶ್ ಶ್ರೀವತ್ಸ ಚಿತ್ರಕ್ಕಾಗಿ ಆರೋಹಿ ನಾರಾಯಣ್ ಮನೋವೈದ್ಯೆ!

ಆಕಾಶ್ ಶ್ರೀವತ್ಸ ತನ್ನ ಮುಂದಿನ ಚಿತ್ರ ನಿರ್ದೇಶನದಲ್ಲಿ ಸಕ್ರಿಯರಾಗಿದ್ದಾರೆ. ರಮೇಶ್ ಅರವಿಂದ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಬಗ್ಗೆ ಹಿಂದೊಮ್ಮೆ ಪತ್ರಿಕೆ ವರದಿ ಮಾಡಿತ್ತು.

ಬೆಂಗಳೂರು: ಆಕಾಶ್ ಶ್ರೀವತ್ಸ ತನ್ನ ಮುಂದಿನ ಚಿತ್ರ ನಿರ್ದೇಶನದಲ್ಲಿ ಸಕ್ರಿಯರಾಗಿದ್ದಾರೆ. ರಮೇಶ್ ಅರವಿಂದ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಬಗ್ಗೆ ಹಿಂದೊಮ್ಮೆ ಪತ್ರಿಕೆ ವರದಿ ಮಾಡಿತ್ತು. ಅಲ್ಲದೆ ಈ ಚಿತ್ರದಲ್ಲಿ ಎರಡು ಮಹಿಳಾ ಪಾತ್ರಗಳು ಮುಖ್ಯ ಭೂಮಿಕೆಯಲ್ಲಿರಲಿದೆ ಎನ್ನುವುದು ಸಹ ವರದಿಯಾಗಿತ್ತು.
ಆ ಎರಡು ಪಾತ್ರಗಳಲ್ಲಿ ಒಬ್ಬರು ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಎನ್ನುವುದು ಹಳೇಸುದ್ದಿ ಈಗ ಸಿಕ್ಕಿರುವ ಮಾಹಿತಿಯಂತೆ ನಿರ್ದೇಶಕರು ಚಿತ್ರದ ಇನ್ನೊಂದು ಮುಖ್ಯ ಪಾತ್ರಕ್ಕಾಗಿ ಆರೋಹಿ ನಾರಾಯಣ್ ಅವರನ್ನು ಆಯ್ಕೆ ಮಾಡಿದಾರೆ.
"ದೃಶ್ಯ" ಚಿತ್ರದ ಮೂಲಕ ನಟನಾ ವೃತ್ತಿಗೆ ಪಾದಾರ್ಪಣೆ ಮಾಡಿದ್ದ ಆರೋಹಿ ನಾರಾಯಣ್ ಇದಾಗಲೇ "ಭೀಮಸೇನ ನಳ ಮಹಾರಾಜ" ಚಿತ್ರದಲ್ಲಿ ಅಭಿನಯಿಸಿದ್ದು ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
ಆಕಾಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಆರೋಹಿ ಇದೇ ಮೊದಲ ಬಾರಿಗೆ ರಮೇಶ್ ಹಾಗೂ ರಾಧಿಕಾ ಅವರೊಡನೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.ರಾಧಿಕಾ ಈ ಚಿತ್ರದಲ್ಲಿ ವಕೀಲಲ್ಗಿ ಹಾಗೂ ರಮೇಶ್ ಅರವಿಂದ್ ಪತ್ನಿಯಾಗಿ ಕಾಣಿಸಿದರೆ ಆರೋಹಿ ಮನೋವೈದ್ಯಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಆಕಾಶ್ ಹಾಗೂ ಅಭಿಜಿತ್ ವೈಆರ್ ಕಥೆ ಬರೆದಿದ್ದು ಜುದಾ ಸ್ಯಾಂಡಿ ಸಂಗೀತವಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವಾಗಿರುವ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಸಹ ವಿಭಿನ್ನ ಗೆಟಪ್ ನಲ್ಲಿ ಕಾಣಿಸಲಿದ್ದು ಮುಖ್ಯ ಪಾತ್ರಗಳ ಆಯ್ಕೆ ಮುಗಿದ ಬಳಿಕ ಜನವರಿಯಿಂದ ಚಿತ್ರತಂಡ ಲೊಕೇಷನ್ ಗಳ ಹುಡುಕಾಟದಲ್ಲಿ ತೊಡಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT