ಬೆಂಗಳೂರು: ಚೇತನ್ ಸದ್ಯ ಸಾಮಾಜಿಕ ಕಾರ್ಯ ಹಾಗೂ ನತನೆ ಎರಡಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ನಮಗೆ ಸಿಕ್ಕಿರುವ ಮಾಹಿರ್ತಿಯಂಯೆ "ಆ ದಿನಗಳು" ಖ್ಯಾತಿಯ ನಟ ತಮ್ಮ ಮುಂದಿನ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರೊಡನೆ ತೆರೆ ಹಂಚಿಕೊಳ್ಳುತಿದ್ದಾರೆ.
ಆರ್.ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ "ಬ್ಯಾಟ್ರಾಯ" ಎಂದು ಹೆಸರಿಡಲಾಗಿದೆ. ಮದನ್ ಮೋಹನ್ ರೆಡ್ಡಿ ಇದಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಭಾನುವಾರ ಚಿತ್ರತಂಡ ಅತ್ಯಂತ ಸರಳವಾಗಿ ಚಿತ್ರದ ಮಹೂರ್ತ ಕಾರ್ಯಕ್ರಮವನ್ನು ಮುಗಿಸಿದ್ದು ಸದ್ಯವೇ ಚೊತ್ರದ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ.. ಚೇತನ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದು ಇದಕ್ಕಾಗಿ ಅವರು ತಮ್ಮ ಉದ್ದನೆಯ ಕೂದಲು ಹಾಗೂ ಗಡ್ಡವನ್ನು ಶೇವ್ ಮಾಡಲಿದ್ದಾರೆ.
ಕ್ರಿಸ್ ಮಸ್ ವಾರಾಂತ್ಯದಲ್ಲಿ ಚಿತ್ರದ ಪ್ರಥಮ ಫೋಟೋಶೂಟ್ ಮಡೆಯಲಿದೆ ಎನ್ನಲಾಗಿದ್ದು ಜನವರಿಯಲ್ಲಿ ಚಿತ್ರ ಸೆತ್ಟೇರಲಿದೆ. ಅಲ್ಲದೆ ಸಮ್ಕ್ರಾಂತಿ ಹಬ್ಬದ ಸಮಯಕ್ಕೆ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೆ ಚಿತ್ರತಂಡ ತೀರ್ಮಾನಿಸಿದ್ದು ಈ ವೇಳೆ ರವಿಚಂದ್ರನ್ ಹಾಗೂ ಚೇತನ್ ಪಾತ್ರದ ಕುರುತು ವಿವರ ಸಿಕ್ಕಲಿದೆ.
ರವಿಚಂದ್ರನ್ ಸದ್ಯ ಉಪೇಂದ್ರ ಜತೆಗಿನ "ರವಿ ಚಂದ್ರ" ಚಿತ್ರದ ಚಿತ್ರೀಕರಣದಲ್ಲಿದ್ದಾರೆ.ಚೇತನ್ "ಅತಿರಥ" ಚಿತ್ರದ ತನ್ನ ಪಾಲಿನ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ಆರ್.ಎಸ್. ಪ್ರೊಡಕ್ಷನ್ ಪಾಲಿಗೆ ಈ ಚಿತ್ರ ಎರಡನೇ ಚಿತ್ರವಾಗಿದ್ದು ಇದಕ್ಕೆ ಮುನ್ನ ಚಿರಂಜೀವಿ ಸರ್ಜಾ ಅಭಿನಯದ "ರಣಂ" ಅನ್ನು ಈ ಸಂಸ್ಥೆ ನಿರ್ಮಾಣ ಮಾಡಿದೆ.