ಅಶ್ವಥಿ ಬಾಬು 
ಸಿನಿಮಾ ಸುದ್ದಿ

ಮಾದಕವಸ್ತು ಮಾರಾಟಕ್ಕೆ ಯತ್ನ: ಮಲಯಾಳಂ ನಟಿ ಅಶ್ವಥಿ ಬಾಬು ಬಂಧನ

ನಿಷೇಧಿತ ಮಾದಕ ವಸ್ತು ಮಾರಾಟ ಯತ್ನದ ಆರೋಪದ ಮೇಲೆ ಪ್ರಸಿದ್ದ ಮಲಯಾಳಂ ಕಿರುತೆರೆ ಹಾಗೂ ಬೆಳ್ಳಿತೆರೆ ನಟಿ ಅಶ್ವಥಿ ಬಾಬು ಅವರನ್ನು ಪೋಲೀಸರು ಬಂಧಿಸಿದ್ದಾರೆ.

ಕೊಚ್ಚಿ: ನಿಷೇಧಿತ ಮಾದಕ ವಸ್ತು ಮಾರಾಟ ಯತ್ನದ ಆರೋಪದ ಮೇಲೆ ಪ್ರಸಿದ್ದ ಮಲಯಾಳಂ ಕಿರುತೆರೆ ಹಾಗೂ ಬೆಳ್ಳಿತೆರೆ ನಟಿ ಅಶ್ವಥಿ ಬಾಬು ಅವರನ್ನು ಪೋಲೀಸರು ಬಂಧಿಸಿದ್ದಾರೆ.
ಮಾದಕ ವಸ್ತು ಎಂಡಿಎಂಎ ಡ್ರಗ್ಸ್ ಅನ್ನು ವ್ಯಕ್ತಿಯೊಬ್ಬನಿಗೆ ಮಾರಲು ತಮ್ಮ ಮನೆ ಮುಂದೆ ಕಾಯುತ್ತಿದ್ದ ನಟಿ ಹಾಗೂ ಆಕೆಯ ಕಾರು ಚಾಲಕನನ್ನು ಬಂಧಿಸಿರುವುದಾಗಿ ತೀರಿಕಾಕ್ಕಾರ ಠಾಣೆ ಪೋಲೀಸರು ಹೇಳಿದ್ದಾರೆ. ಬಂಧನ ವೇಳೆ ಲಕ್ಷ ರು. ಬೆಲೆ ಬಾಳುವ 58 ಗ್ರಾಂ ಎಂಡಿಎಂಎ  ಡ್ರಗ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ.
ಆಘಾತಕಾರಿ ಅಂಶವೆಂದರೆ ಈ ಡ್ರಗ್ಸ್ ಅನ್ನು ಬೆಂಗಳೂರಿನಿಂದ ತರಲಾಗಿತ್ತು.ನಟಿ ಅಶ್ವಥಿ ಬಾಬುಗೆ ನೆರವಾಗಿದ್ದ ಚಾಲಕ ಬಿನೋಯ್ ಅಬ್ರಹಾಂ ಈ ಮಾದಕ ವಸ್ತುಗಳನ್ನು ಬೆಂಗಳೂರಿನಿಂದ ತರಿಸಿದ್ದ.
ಖಚಿತ ಸುಳಿವಿನ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ನಟಿಯನ್ನು ಬೆಂಬತ್ತಿದ ಪೋಲೀಸರು ಕಡೆಗೂ ಆಕೆಯನ್ನು ಮಾಲು ಸಮೇತ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಿರುವನಂತಪುರ ಮೂಲದ ನಟಿ ತನ್ನ ಚಾಲಕನ ನೆರವಿನಿಂದ  ಬೆಂಗಳೂರಿನಿಂದ ಗಾಂಜಾ ಮತ್ತು ಡ್ರಗ್ಸ್ ಅನ್ನು ತರಿಸಿ ಕೇರಳದಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ನಟಿ ಕೆಲ ತಿಂಗಳ ಹಿಂದಷ್ಟೇ ಕೊಚ್ಚಿಯಲ್ಲಿ ಫ್ಲ್ಯಾಟ್ ಒಂದನ್ನು ಬಾಡಿಗೆಗೆ ಪಡೆದಿದ್ದರು.
ಸಧ್ಯ ತನಿಖೆ ಚುರುಕುಗೊಳಿಸಿರುವ ಪೋಲೀಸರು ಬೆಂಗಳೂರಿನಲ್ಲಿ ಸಹ ಈ ಈ ತಂಡದ ಇತರೆ ಸದಸ್ಯರಿಗಾಗಿ ಶೋಧ ನಡೆಸಲಿದೆ 
ಕಳೆದ ವರ್ಷ ಕೊಚ್ಚಿ ಪೋಲೀಸರು 280 ಕೋಟಿ ರು. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು ಎನ್ನುವುದು ಇಲ್ಲಿ ಸ್ಮರಣಾರ್ಹ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ