ಯಶ್ 
ಸಿನಿಮಾ ಸುದ್ದಿ

ಯಶ್ ಕೆಜಿಎಫ್ ಚಿತ್ರಕ್ಕೆ ತಡೆಯಾಜ್ಞೆ ಬರಲು ಕಾರಣವಾದ 'ರೌಡಿ ತಂಗಂ' ಯಾರು?

ದೇಶಾದ್ಯಂತ ನಾಳೆ ಭರ್ಜರಿಯಾಗಿ ಬಿಡುಗಡೆಯಾಗಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆಗೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬೆಂಗಳೂರು: ದೇಶಾದ್ಯಂತ ನಾಳೆ ಭರ್ಜರಿಯಾಗಿ ಬಿಡುಗಡೆಯಾಗಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆಗೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು ಇದಕ್ಕೆ ಕೇಳಿ ಬರುತ್ತಿರುವ ಹೆಸರು ಮತ್ತು ಕಾರಣ ಒಂದೇ, ಅದು ರೌಡಿ ತಂಗಂ ಹೆಸರು, ಹಾಗಾದರೆ ಯಾರು ಈ ರೌಡಿ ತಂಗಂ. ಆತನಿಗೂ ಕೆಜಿಎಫ್ ಗೂ ಏನು ಸಂಬಂಧ ಅಂತೀರಾ. 
ಕೋಲಾರ ಮತ್ತು ಕೆಜಿಎಫ್ ನಲ್ಲಿ ಒಂದು ಕಾಲದಲ್ಲಿ ಸದ್ದು ಮಾಡಿದ್ದ ರೌಡಿ ತಂಗಂ. ಈ ಹಿಂದೆ ಲೂಸ್ ಮಾದ ಯೋಗೀಶ್ ಕೋಲಾರ ಸಿನಿಮಾ ಮಾಡಿದ್ದಾಗಲೂ ಈ ತಂಗಂ ಜೀವನಾಧಾರಿತ ಚಿತ್ರ ಎಂಬ ಹೆಸರು ಕೇಳಿ ಬಂದಿತ್ತು. 
ಕೆಜಿಎಫ್ ಚಿತ್ರದ ವಿರುದ್ಧ ದಾವೆ ಹೂಡಿದಿರುವ ವೆಂಕಟೇಶ್ ತಂಗಂ ಬಗ್ಗೆ ಯಾವುದೇ ಸಿನಿಮಾ, ಕಥೆ, ಸಾಕ್ಷ್ಯಚಿತ್ರ ಮಾಡಬೇಕಾದರೆ ತಮ್ಮ ಅನುಮತಿ ಪಡೆಯಬೇಕೆಂದು ತಂಗಂ ಅವರ ತಾಯಿ ಬಳಿಯಿಂದ ಅನುಮತಿ ಪಡೆದುಕೊಂಡಿದ್ದರು. ಕೆಜಿಎಫ್ ಸಹ ತಂಗಂ ಕತೆ ಆಧಾರಿತ ಎಂಬುದು ವೆಂಕಟೇಶ್ ಆರೋಪ. 
ಸದ್ಯ ರೌಡಿ ತಂಗಂ ಬಗ್ಗೆ ಯಾವುದೇ ಚಿತ್ರ ನಿರ್ಮಾಣ ಮಾಡಬೇಕಾದರೂ ವೆಂಕಟೇಶ್ ಬಳಿಯೇ ಅನುಮತಿ ಪಡೆಯಬೇಕಿದೆ. ಈ ಹಿಂದೆ ಕೋಲಾರ್ ಸಿನಿಮಾ ಮಾಡಿದ್ದ ನಿರ್ಮಾಪಕ ಆರ್ ಲಕ್ಷ್ಮಿ ನಾರಾಯಣ್ ಮತ್ತು ಆರ್ ರಮೇಶ್ ಅವರು ವೆಂಕಟೇಶ್ ಅವರಿಂದ ಅನುಮತಿ ಪಡೆದುಕೊಂಡಿದ್ದರು. 
ಕೆಜಿಎಫ್ ಚಿತ್ರದಲ್ಲಿ ರೌಡಿ ತಂಗಂ ಕುರಿತ ದೃಶ್ಯಗಳಿವೆ. ಇದರಲ್ಲಿ ಅವರ ಕಥೆ ಬಳಸಲಾಗಿದೆ. ಹಾಗಾಗಿ, ಅವರು ಕಥೆಯ ಬಗ್ಗೆ ಎಲ್ಲಿಯೂ ಸುಳಿವು ಬಿಟ್ಟುಕೊಟ್ಟಿಲ್ಲ ಎಂಬುದು ವೆಂಕಟೇಶ್ ಆರೋಪ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ

ನೇಪಾಳ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದವು ಒಂಬತ್ತು ಜಲವಿದ್ಯುತ್ ಕೇಂದ್ರಗಳು!

ದಿಢೀರ್‌ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!