ರಾಜು ಜೇಮ್ಸ್ ಬಾಂಡ್ ಸಿನಿಮಾ ಸ್ಟಿಲ್
ಬೆಂಗಳೂರು: ದೀಪಕ್ ಮಧುವನಹಳ್ಳಿ ನಿರ್ದೇಶನದ ರಾಜು ಜೇಮ್ಸ್ ಬಾಂಡ್ ಚಿತ್ರದಲ್ಲಿ ರಾಜು ಕನ್ನಡ ಮೀಡಿಯಂ ಖ್ಯಾತಿಯ ಗುರುನಂದನ್ ನಟಿಸುತ್ತಿದ್ದು, ಲಂಡನ್ ನಲ್ಲಿ ಶೂಟಿಂಗ್ ನಡೆಯುತ್ತಿದೆ.
ಚಿತ್ರದ ಹಾಡಿನ ಶೂಟಿಂಗ್ ನಡೆಯುತ್ತಿದ್ದು, ಮುರುಳಿ ಮಾಸ್ಟರ್ ಕೊರಿಯೋಗ್ರಾಫ್ ಮಾಡಿದ್ದಾರೆ, ಹಾಲಿವುಡ್ ನ ಜೇಮ್ಸ್ ಬಾಂಡ್ ಸಿನಿಮಾ ಚಿತ್ರೀಕರಣ ನಡೆದ ಸ್ಥಳದಲ್ಲೇ ಕನ್ನಡದ ಜೇಮ್ಸ್ ಬಾಂಡ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ, ಕ್ಯಾಸಿನೋ ರಾಯಲ್ ಬ್ರಿಡ್ಜ್ ಮೇಲೆ ಚಿತ್ರೀಕರಣ ನಡೆಸಲಾಗುತ್ತಿದೆ. ಲಂಡನ್ ಐ ಕ್ಯೂಬಿಕಲ್ ನಲ್ಲೂ ಶೂಟಿಂಗ್ ನಡೆಯುತ್ತಿದೆ.
ಲಂಡನ್ ನಿಂದ ವಾಪಾಸಾಗಿರು ಚಿತ್ರ ತಂಡ ಮೃದುಲಾ ಮತ್ತು ಗುರುನಂದನ್ ಸೆಟ್ ನಲ್ಲಿದ್ದ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮೊದಲು 10 ದಿನಗಳ ಕಾಲ ಶೂಟಿಂಗೆಗೆ ನಿರ್ಧರಿಸಲಾಗಿತ್ತು, ಆದರೆ ಅಲ್ಲಿನ ತೀರಾ ಚಳಿಯಿಂದಾಗಿ ಚಿತ್ರತಂಡ ತಮ್ಮ ಸಮಯ ವಿಸ್ತರಣೆ ಮಾಡಿತ್ತು.
ನಿರ್ಮಾಪಕರಾದ ಮಂಜುನಾಥ ವಿಶ್ವಕರ್ಮ ಮತ್ತು ಕಿರಣ್ ಭಾರ್ತೂರು ಯಾವುದೇ ಕಾರಣಕ್ಕೂ ಚಿತ್ರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದು ಮಧುವನಳ್ಳಿ ತಿಳಿಸಿದ್ದಾರೆ.