ನಮಿತಾ 
ಸಿನಿಮಾ ಸುದ್ದಿ

ಪ್ರತಿಯೊಬ್ಬರು ಬಾಹುಬಲಿ ಅಥವಾ 2.0 ಮಾಡಲು ಸಾಧ್ಯವಿಲ್ಲ: ನಮಿತಾ

ಬಿಗ್‍ಬಾಸ್‍ನಿಂದ ಹೊರಬಂದ ನಂತರ ಅಗಂಬಾವಮ್ ಚಿತ್ರದಲ್ಲಿ ಬ್ಯುಸಿಯಾಗಿರುವ ದಕ್ಷಿಣ ಭಾರತದ ನಟಿ ನಮಿತಾ ಪ್ರತಿಯೊಬ್ಬರು ಬಾಹುಬಲಿ ಅಥವಾ 2.0 ಈ ರೀತಿಯ ಚಿತ್ರಗಳನ್ನು ಮಾಡಲು ಸಾಧ್ಯವಿಲ್ಲ...

ಬಿಗ್‍ಬಾಸ್‍ನಿಂದ ಹೊರಬಂದ ನಂತರ ಅಗಂಬಾವಮ್(ಅಹಂಕಾರ) ಚಿತ್ರದಲ್ಲಿ ಬ್ಯುಸಿಯಾಗಿರುವ ದಕ್ಷಿಣ ಭಾರತದ ನಟಿ ನಮಿತಾ ಪ್ರತಿಯೊಬ್ಬರು ಬಾಹುಬಲಿ ಅಥವಾ 2.0 ಈ ರೀತಿಯ ಚಿತ್ರಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಸಂದರ್ಶನದಲ್ಲಿ ಮಾತನಾಡಿದ ನಮಿತಾ ಅವರು 2017ರ ತಮಿಳು ಬಿಗ್ ಬಾಸ್ ನಲ್ಲಿ ಪಾಲ್ಗೊಂಡ ನಂತರ ಸುಮ್ಮನಾಗಿದ್ದ ಅವರು ಇದೀಗ ಅಗಂಬಗಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
2016ರಲ್ಲಿ ಪುಲಿಮುರುಗನ್ ಚಿತ್ರದಲ್ಲಿ ಅಭಿನಯಿಸಿದ ನಂತರ ನಮಿತಾ ದೊಡ್ಡ ಬ್ರೇಕ್ ತೆಗೆದುಕೊಂಡು ಇದೀಗ ಮತ್ತೇ ಚಿತ್ರರಂಗಕ್ಕೆ ಮರಳಿದ್ದಾರೆ. ನಮಿತಾ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ ಒಟ್ಟು 40 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 
ಬಿಗ್ ಬಾಸ್ ನನ್ನ ಜೀವನವನ್ನು ತೀವ್ರವಾಗಿ ಬದಲಾಯಿಸಿತು. ಅಲ್ಲಿನ ಬಹಳಷ್ಟು ಸಂಗತಿಗಳು ಕಹಿ-ಸಿಹಿಯಾಗಿವೆ ಆದರೆ ಅವು ಯಾವುದರ ಬಗ್ಗೆ ನನಗೆ ವಿಷಾದವಿಲ್ಲ. ಇನ್ನು ಬಿಗ್ ಬಾಸ್ ಮನೆಯಿಂದ ನಮಿತಾ 28ನೇ ದಿನಕ್ಕೆ ಹೊರಬಂದಿದ್ದರು. 
ಇನ್ನು ಸಣ್ಣ ಬಜೆನ್ ನ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದೀರಾ ಎಂಬುದಕ್ಕೆ ಎಲ್ಲರ ಕೈಯಲ್ಲೂ ಬಾಹುಬಲಿ ಅಥವಾ 2.0 ಅಂತ ಚಿತ್ರಗಳನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾನು ಸಣ್ಣ ಬಜೆಟ್ ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತಿದ್ದೇನೆ. ಪ್ರತಿಯೊಬ್ಬರು ರಜನಿಕಾಂತ್ ಅಥವಾ ಕಮಲ್ ಹಾಸನ್ ಆಗಲಾರರು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT