ಬೆಂಗಳೂರು: ಕೆಜಿಎಫ್ ಚಿತ್ರ ಬಿಡುಗಡೆಯಾಗಿ 2 ದಿನಗಳೇ ಕಳೆದರೂ ಚಿತ್ರದ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ ಎಂದೆನಿಸುತ್ತದೆ. ಕನ್ನಡ ಭಾಷೆ ಎಂಬುದೊಂದಿದೆ ಎಂದೇ ತಿಳಿಯದ ವಿದೇಶಿಗರು ಈಗ ಕೆಜಿಎಫ್ ಚಿತ್ರದ ಮೂಲಕ ಕನ್ನಡ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದಾರೆ.
ಹೌದು.. ಈ ಹಿಂದೆ ಕೆಜಿಎಫ್ ಚಿತ್ರದ ಟ್ರೈಲರ್ ನೋಡಿ ಪುಲ್ ಫಿದಾ ಆಗಿ ತಮ್ಮ ಅನುಭವವನ್ನು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದ ವಿದೇಶಿಗರು ಇದೀಗ ಕೆಜಿಎಫ್ ಚಿತ್ರದ ಹೀರೋ ನಟ ಯಶ್ ರನ್ನು ಸಂದರ್ಶನ ಮಾಡಿದ್ದಾರೆ. ಸಂದರ್ಶದನದಲ್ಲಿ ಯಶ್ ಕೆಜಿಎಫ್ ಚಿತ್ರದ ಚಿತ್ರೀಕರಣದ ವೇಳೆ ತಮಗೆ ಎದುರಾದ ಸಂಕಷ್ಟಗಳನ್ನೂ ಬಿಚ್ಚಿಟ್ಟಿದ್ದಾರೆ. ಚಿತ್ರಕರಣದ ನಡೆದ ಸ್ಥಳ ಮತ್ತು ತಮಗೆ ಎದುರಾದ ಸವಾಲುಗಳು, ಸಮಸ್ಯೆಗಳನ್ನು ವಿವರಿಸಿದ್ದಾರೆ.
ಅಲ್ಲದೆ ಯಶ್ ತಮ್ಮ ಸಿನಿ ಜರ್ನಿ ಮತ್ತು ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನಾ ದಿನಗಳ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಮೈಸೂರಿನ ದಿನಗಳು ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಲಗಿದ್ದ ವಿಚಾರ ಮತ್ತು ಸಿನಿಮಾ ಆರಂಭಿಕ ದಿನಗಳಲ್ಲಿ ತಾವು ಎದುರಿಸಿದ ಸವಾಲುಗಳನ್ನು ಬಿಚ್ಚಿಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics