ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ನಿರ್ಮಿಸಿದೆ.
ಮೊದಲ ದಿನ ಕೆಜಿಎಫ್ ಚಿತ್ರ 25 ಕೋಟಿ ರುಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ ಎರಡನೇ ದಿನವೂ ಸಹ 25 ಕೋಟಿ ರುಪಾಯಿ ಕಲೆಕ್ಷನ್ ಮಾಡುವ ಮೂಲಕ 50 ಕೋಟಿ ಗಳಿಕೆ ಮಾಡಿದೆ. ಇನ್ನು ಕನ್ನಡದ ಮಟ್ಟಿಗೆ ಇದು ದಾಖಲೆ ನಿರ್ಮಿಸಿದೆ.
ಕರ್ನಾಟಕದಲ್ಲಿ ಕೆಜಿಎಫ್ ಚಿತ್ರ ಮೊದಲ ದಿನ 13 ಕೋಟಿ ರುಪಾಯಿ ಕಲೆಕ್ಷನ್ ಹಾಗೂ ಎರಡನೇ ದಿನ 14 ಕೋಟಿ ಕಲೆಕ್ಷನ್ ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದು ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹಿಂದಿಯಲ್ಲಿ ಮೊದಲ ದಿನ 2.10 ಕೋಟಿ ರುಪಾಯಿ ಕಲೆಕ್ಷನ್ ಮಾಡಿದ್ದು ಎರಡನೇ ದಿನ 3 ಕೋಟಿ ಕಲೆಕ್ಷನ್ ಮಾಡಿದ್ದು ಒಟ್ಟಾರೆ 5.10 ಕೋಟಿ ಗಳಿಗೆ ಮಾಡಿದೆ.